ಪ್ರಜಾಸ್ತ್ರ ಸುದ್ದಿ
ವಿಶ್ವದ ಪ್ರಸಿದ್ಧ ಸಾಮಾಜಿಕ ಮಾಧ್ಯಮ ಸಂಸ್ಥೆಯಾದ ಮೆಟಾ ಬುಧವಾರ 8 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದೆ. ಕಂಪನಿಯ ಉದ್ಯೋಗಿಗಳಲ್ಲಿ ಶೇಕಡ 10ರಷ್ಟು ನೌಕರರನ್ನು ಕೆಲಸದಿಂದ ತೆಗೆದು ಹಾಕಿದೆ. ಎಐ ದುನಿಯಾಗೆ ರೆಡಿಯಾಗುತ್ತಿರುವ ಕಂಪನಿ ಇಂತಹದೊಂದು ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ.
ಬ್ರಿಟನ್, ಅಮೆರಿಕ ಸೇರಿದಂತೆ ಇತರೆ ದೇಶಗಳಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳಿಗೆ ಆಯಾ ದೇಶದ ಕಾಲಮಾನದ ಪ್ರಕಾರ ಮುಂಜಾನೆ 4 ಗಂಟೆಯ ಸುಮಾರಿಗೆ ಮೇಲ್ ಹೋಗಿದೆ. ಕಂಪನಿಯ ಎಚ್ಆರ್ ಓ ಈ ವಾರ ಮನೆಯಿಂದಲೇ ಕೆಲಸ ಮಾಡಿ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಇಂತಹದೊಂದು ಬೆಳವಣಿಗೆ ನಡೆದಿದೆ.



