LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮೊರಟಗಿ ದುರಂತ ಘಟನೆ: ಬಿಎನ್ ಬಿ ಫೌಂಡೇಶನ್ ವತಿಯಿಂದ ಧನಸಹಾಯ

ಸಂತ್ರಸ್ತ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಶ್ರೀಶೈಲಗೌಡ ಬಿರಾದಾರ

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಅಕಾಲಿಕ ಮಳೆಯಿಂದ ಇತ್ತೀಚೆಗೆ ಮತಕ್ಷೇತ್ರದ ಆಲಮೇಲ ತಾಲೂಕಿನ ಮೊರಟಗಿ ಗ್ರಾಮದಲ್ಲಿ ಮನೆಯ ಮೇಲ್ಛಾವಣಿ ಕುಸಿದುಬಿದ್ದು ಗುರುನಾಥ ಬಡಿಗೇರ, ಪತ್ನಿ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ ಘಟನೆ ನಡೆದಿದೆ. ಈ ಸಂಬಂಧ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಅವರು ಮೃತರ ಮನೆಗೆ ಭೇಟಿ ನೀಡಿದರು. ಮೃತನ ತಾಯಿ ಹಾಗೂ ಮಗನಿಗೆ ಸಾಂತ್ವಾನ ಹೇಳಿದರು. ಸಂತಸ್ತ ಕುಟುಂಬಕ್ಕೆ ಬಿಎನ್ ಬಿ ಫೌಂಡೇಶನ್ ವತಿಯಿಂದ ಧನ ಸಹಾಯ ಮಾಡಿದರು. ಮಗುವಿನ ಶೈಕ್ಷಣಿಕ ಜೀವನಕ್ಕೆ ಬೇಕಾದ ಎಲ್ಲ ರೀತಿಯ ನೆರವು ನೀಡುವ ಭರವಸೆ ನೀಡಿದರು.

ಮೃತರ ಸಂಬಂಧಿಕರು ಹಾಗೂ ಗ್ರಾಮಸ್ಥರೊಂದಿಗೆ ಬಿದ್ದ ಮನೆಯ ಪರಿಶೀಲನೆ ಮಾಡಿದರು. ಇಡೀ ಕುಟುಂಬವನ್ನು ಕಳೆದುಕೊಂಡ ಈ ಮಗುವಿನ ನೋವು ಯಾರಿಗೂ ಬಾರದಿರಲಿ. ಈ ವಯಸ್ಸಿನಲ್ಲಿ ಹೆತ್ತವರನ್ನು ಕಳೆದುಕೊಂಡ ಮಗುವಿಗೆ ಆರ್ಥಿಕ ಆಸರೆಗಿಂತ ಹೆಚ್ಚಾಗಿ ಸಾಮಾಜಿಕ ಭದ್ರತೆಯ ಅಗತ್ಯವಿದೆ. ಮಗುವಿನ ಶಿಕ್ಷಣಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಫೌಂಡೇಶನ್ ವತಿಯಿಂದ ಅಗತ್ಯವಿರುವ ಸಂಪೂರ್ಣ ಶೈಕ್ಷಣಿಕ ಜವಾಬ್ದಾರಿಯನ್ನು ವಹಿಸಿಕೊಳ್ಳಲಾಗುವುದು ಎಂದರು.

news_1779080442_0_158.webp

ಈ ವೇಳೆ ವಿಶ್ವಕರ್ಮ ಸಮಾಜದ ಶ್ರೀ ರಾಮಚಂದ್ರ ಮಹಾಸ್ವಾಮಿಗಳು, ಸಿಂದಗಿ ತಾಲೂಕ ಗಾಣಿಗ ಸಮಾಜದ ಮಾಜಿ ಅದ್ಯಕ್ಷ ಮಲ್ಲಣ್ಣ ಮನಗೂಳಿ, ಗ್ರಾಮಸ್ಥರಾದ ನವೀನಕುಮಾರ ನೆಲ್ಲಗಿ, ತಮ್ಮಣ್ಣಗೌಡ ಬೋನಾಳ, ವೀಶ್ವನಾಥ ಬೆಳಗುಂಪಿ, ಅನೀಲ ಕೋಣಶಿರಸಗಿ, ಇರ್ಫಾನ್ ಜಾಲಿಗೀಡ, ಕನ್ನಯ ಕೇರಿಗೋಂಡ, ಈರಣ್ಣ ವಿಶ್ವಕರ್ಮ, ಭಗವಂತ್ರಾಯ ಕಕ್ಕಳಮೇಲಿ, ರಾವುತರಾಯ ಗುಗ್ಗರಿ ಅವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST