LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನವಗ್ರಹ ರೀ ರಿಲೀಸ್.. ಡಿ ಬಾಸ್ ಫ್ಯಾನ್ಸ್ ಅಬ್ಬರ

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ ವೈದ್ಯಕೀಯ ಕಾರಣಕ್ಕೆ 6 ವಾರಗಳ ಕಾಲ ಮಧ್ಯಂತರ ಜಾಮೀನು ಪಡೆದು ಹೊರ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಇಂದು(ಶುಕ್ರವಾರ) ಅವರ ನವಗ್ರಹ ಸಿನಿಮಾ ಮರು ಬಿಡುಗಡೆಯಾಗಿದೆ. ಅಭಿಮಾನಿಗಳು ಇದನ್ನು ಭರ್ಜರಿಯಾಗಿ ಸಂಭ್ರಮಿಸುತ್ತಿದ್ದಾರೆ. ದರ್ಶನ್ ಸಹೋದರ ದಿನಕರ್ ತೂಗುದೀಪ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.

16 ವರ್ಷಗಳ ಹಿಂದೆ ಈ ಸಿನಿಮಾ ರಿಲೀಸ್ ಆಗಿತ್ತು. ಕನ್ನಡದ ಖ್ಯಾತ ಖಳನಟರ ಮಕ್ಕಳು ಹಾಗೂ ಇಬ್ಬರು ನಟಿಯರು ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. ದರೋಡೆಕೋರರ ಗ್ಯಾಂಗ್ ಕಥೆ ಅಂದು ಅದ್ಭುತವಾಗಿ ಮೂಡಿಬಂದಿತು. ನವಗ್ರಹ-2 ಬರುತ್ತೆ ಎನ್ನುವ ನಿರೀಕ್ಷೆ ಕ್ಲೈಮ್ಯಾಕ್ಸ್ ನಲ್ಲಿ ನಿರ್ದೇಶಕರು ಸುಳುವು ಕೊಟ್ಟಿದ್ದರು. ಆದರೆ, ಇದುವರೆಗೂ ಅದು ಆಗಿಲ್ಲ. ಇನ್ನು ನಟ ದರ್ಶನ್ ಜೈಲಿನಲ್ಲಿರುವಾಗಲೇ 'ಕರಿಯ' ಸಿನಿಮಾ ಸಹ ಮರು ಬಿಡುಗಡೆಯಾಗಿ ಅಭಿಮಾನಿಗಳು ಎಂಜಾಯ್ ಮಾಡಿದರು.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST