LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನವವಿವಾಹಿತೆ ಆತ್ಮಹತ್ಯೆ, ಪತಿ ಮನೆ ಪಕ್ಕದಲ್ಲಿಯೇ ಅಂತ್ಯಸಂಸ್ಕಾರ

ಪ್ರಜಾಸ್ತ್ರ ಸುದ್ದಿ

ಕೋಲಾರ(Kolara): ನವವಿವಾಹಿತೆಯೊಬ್ಬರು ಆತ್ಮಹತ್ಯೆ(Suicide) ಮಾಡಿಕೊಂಡ ಪ್ರಕರಣ ಸಹಕಾರ ನಗರದಲ್ಲಿ ಶನಿವಾರ ನಡೆದಿದೆ. ಮಗಳ ಸಾವಿಗೆ ಪತಿಯ ಮನೆಯವರು ಕಾರಣವೆಂದು ಆಕ್ರೋಶ ವ್ಯಕ್ತಪಡಿಸಿದ ಕುಟುಂಬಸ್ಥರು ನ್ಯಾಯಕ್ಕಾಗಿ ಪ್ರತಿಭಟನೆ(Protest) ನಡೆಸಿದ್ದಾರೆ. ವಿವಿಧ ಸಂಘಟನೆಯವರು ಬೆಂಬಲ ನೀಡಿದರು. ಮಾನಸಾ(24) ಅನ್ನೋ ಯುವತಿಯನ್ನು ಉಲ್ಲಾಸಗೌಡ ಎಂಬಾತನ ಜೊತೆಗೆ ಕಳೆದ ಒಂದು ವರ್ಷದ ಹಿಂದೆ ಮದುವೆ ಮಾಡಿಕೊಡಲಾಗಿದೆ. ವರದಕ್ಷಿಣೆ ಕಿರುಕುಳದಿಂದ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ಹೇಳಿದ್ದಾರೆ.

ಅಳಿಯ ಉಲ್ಲಾಸಗೌಡ ಮನೆ ಮುಂದೆ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಪೊಲೀಸರೊಂದಿಗೆ ವಾಗ್ವಾದ ನಡೆದಿದೆ. ಪೊಲೀಸರು ನ್ಯಾಯ ಕೊಡಿಸುವ ಭರವಸೆ ನೀಡಿದ ಬಳಿಕ ತೂರಾಂಡಹಳ್ಳಿಯಲ್ಲಿರುವ ಅಳಿಯನ ಮನೆ ಪಕ್ಕದಲ್ಲಿಯೇ ಮಗಳ ಅಂತ್ಯಕ್ರಿಯೆ ನಡೆಸಿದ್ದಾರೆ. ಈ ವೇಳೆ ಉಲ್ಲಾಸಗೌಡ ಹಾಗೂ ಆತನ ಕುಟುಂಬಸ್ಥರು ಇರಲಿಲ್ಲ. ಕಳೆದ ಒಂದು ವರ್ಷದ ಹಿಂದೆ ಇವರ ಮದುವೆಯಾಗಿದೆ. ಬೆಂಗಳೂರಿನ ಗಿರಿನಗರದಲ್ಲಿ ವಾಸವಾಗಿದ್ದರು. ವರದಕ್ಷಿಣೆ ವಿಚಾರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದಂತೆ. ಹೀಗಾಗಿ ಮಾನಾಸ ತವರು ಮನೆಗೆ ಕಳಿಸಿದ್ದರಂತೆ. ಡಿವೋರ್ಸ್ ಸಂಬಂಧ ವಕೀಲರ ನೋಟಿಸ್ ಬಂದಿದ್ದರಿಂದ ಬೇಸತ್ತ ಮಾನಸಾ ಡೆತ್(Death Note) ನೋಟ್ ಬರೆದಿಟ್ಟು ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳಂತೆ. ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST