ಪ್ರಜಾಸ್ತ್ರ ಸುದ್ದಿ
ಕೊಲ್ಕತ್ತಾ(Kolkta): ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಮಹಿಳೆಯರಿಗೆ ಪ್ರತಿ ತಿಂಗಳು ಅನ್ನಪೂರ್ಣ ಹೆಸರಲ್ಲಿ 3 ಸಾವಿರ ರೂಪಾಯಿ ಗೌರವಧನ ನೀಡುವ ಯೋಜನೆ ಪ್ರಾರಂಭಿಸಿದೆ. ಆದರೆ, ಇದವರೆಗೂ ಹಣ ಬಾರದ ಹಿನ್ನಲೆಯಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. ಮಾಲ್ದಾದ್ ಗಾಜೋಲ್ ನಲ್ಲಿ ಅನಿತಾ ಖಾತೂನ್(32) ಅನ್ನೋ ಮಹಿಳೆ ಅನ್ನಪೂರ್ಣ ಯೋಜನೆಯ ಹಣಕ್ಕಾಗಿ ಕಚೇರಿಗೆ ಅಲೆದು ಅಲೆದು ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ರಾಜ್ಯದ ತುಂಬಾ ಪ್ರತಿಭಟನೆ ಜೋರಾಗಿದೆ. ಪುರಸಭೆ, ಬಿಡಿಒ ಸೇರಿದಂತೆ ಸರ್ಕಾರಿ ಕಚೇರಿಗಳ ಮುಂದೆ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. ಕೋಲ್ಕತ್ತಾದ ಬಿರಾಟಿಯಲ್ಲಿ ಮಹಿಳೆಯರು ರೈಲು ತಡೆದು ಪ್ರತಿಭಟಿಸಿದ್ದು, ಶೀಲ್ದಾ-ಬೊಂಗಾಂವ್ ರೈಲು ಒಂದು ಗಂಟೆ ತಡವಾಗಿದೆ. ಮುರ್ಷಿದಾಬಾದ್ ನ ಜಂಗೀಪುರದ ಪುರಸಭೆ ಕಚೇರಿಗೆ ನೂರಾರು ಮಹಿಳೆಯರು ನುಗ್ಗಿದ್ದಾರೆ. ಕಲಿಯಾಚಕ್ ನಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗಿದೆ.
ಫಲಾನುಭವಿಗಳ ಸಂಖ್ಯೆ ಜೂನ್ ನಲ್ಲಿ 28 ಲಕ್ಷ, ಜುಲೈನಲ್ಲಿ 1.19 ಕೋಟಿ, ಆಗಸ್ಟ್ ನಲ್ಲಿ 1.45 ಕೋಟಿ ಆಗಿದೆ. 17 ಲಕ್ಷ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದ ಕಾರಣ 10 ಲಕ್ಷ ಅರ್ಜಿಗಳು ತಿರಸ್ಕರಿಸಲಾಗಿದೆ. ಇನ್ನು 20 ರಿಂದ 30 ಲಕ್ಷ ನೈಜ ಫಲಾನುಭವಿಗಳಿದ್ದಾರೆ ಎಂದು ಸಿಎಂ ಸುವೇಂದ್ ಅಧಿಕಾರ ತಿಳಿಸಿದ್ದಾರೆ. ಟಿಎಂಸಿ ಸರ್ಕಾರದ ಅವಧಿಯಲ್ಲಿ ಲಕ್ಷ್ಕಿ ಭಂಡಾರ ಯೋಜನೆ ಈಗ ಅನ್ನಪೂರ್ಣ ಯೋಜನೆಯಾಗಿದೆ.



