LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರಭುಲಿಂಗೇಶ್ವರ ಪುಣ್ಯ ಸ್ಮರಣೆ ಹಾಗೂ ಜಾತ್ರಾ ಮಹೋತ್ಸವ

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಅಗರಖೇಡದ ಪರಮಜ್ಯೋತಿ ಶ್ರೀ ಲಿಂ.ಪ್ರಭುಲಿಂಗೇಶ್ವರ ಪುಣ್ಯ ಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವವು ಮಾರ್ಚ್ 18ರಿಂದ ಪ್ರಾರಂಭವಾಗಿದ್ದು, 28ರವರಗೆ ವಿಜ್ರಂಭಣೆಯಿಂದ ಜರುಗಲಿದೆ ಎಂದು ಪ್ರಭುಲಿಂಗೇಶ್ವರ ಸಂಸ್ಥಾನ ವಿರಕ್ತಮಠದ ಅಭಿನವ ಪ್ರಭುಲಿಂಗೇಶ್ವರ ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶ್ರೀ ಅಭಿನವ ಪ್ರಭುಲಿಂಗೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ  ಶ್ರೀ ಲಿಂ.ಪ್ರಭುಲಿಂಗೇಶ್ವರ ಪುಣ್ಯ ಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವ ಪ್ರತಿದಿನ ಸಾಯಂಕಾಲ ಶ್ರೀ ಸೊನ್ನಲಗಿ ಸಿದ್ದರಾಮೇಶ್ವರ ಪುರಾಣವನ್ನು ಅಫಜಲಪೂರ ತಾಲೂಕಿನ ನೀಲೂರಿನ ಶ್ರೀ ರಾಚೋಟೆಶ್ವರ ಮಠದ ಶ್ರೀ ಶಿವಬಸವ ಮಹಾಸ್ವಾಮಿಗಳು ನಡೆಸಿಕೊಡಲಿದ್ದಾರೆ. ಹಾರ್ಮೋನಿಯಂ ಸೇವೆಯನ್ನು ಮಲ್ಲಿಕಾರ್ಜುನ ಗವಾಯಿಗಳು ಹಾಗೂ ತಬಲಾ ಸಾಥಿಯನ್ನು ಕಾಚಾಪುರ ಕಲ್ಲಯ್ಯಸ್ವಾಮಿಗಳು ನಡೆಸಿಕೊಡಲಿದ್ದಾರೆ.

26ರಂದು ಆಲಮೇಲದ ಶ್ರೀ ಚಂದ್ರಶೇಖರ ಶಿವಾಚಾರ್ಯರಿಂದ ಲಿಂಗದಿಕ್ಷೆ ನಡೆಯಲಿದೆ. 27 ರಂದು  ಪರಮ ಗುರು ಶ್ರೀ ಲಿಂ.ಪ್ರಭುಲಿಂಗೇಶ್ವರ ಕತೃಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ಕಾರ್ಯಕ್ರಮದಲ್ಲಿ ತಡವಲಗಾ, ಯಡ್ರಾಮಿ, ಆಲಮೇಲ ಶ್ರೀಗಳು ಹಾಗೂ ರಾಜಕೀಯ ಗಣ್ಯರು, ಗ್ರಾಮ ಪಂಚಾಯ್ತಿ ಸದಸ್ಯರು, ಅಧಿಕಾರಿಗಳು ಗ್ರಾಮದ ಮುಖಂಡರು ಭಾಗವಹಿಸಲಿದ್ದಾರೆ. 28ರಂದು ಖೇಡಗಿಯ ವಿರಕ್ತಮಠದ ಶ್ರೀ ಶಿವಬಸವರಾಜೇಂದ್ರ ಶ್ರೀಗಳ ಸಾನಿದ್ಯದಲ್ಲಿ ಮುತ್ತೈದಯರ ಉಡಿ ತುಂಬುವ ಹಾಗೂ ಸಮಾರೋಪ ಸಮಾರಂಭದ ಕಾರ್ಯಕ್ರಮಗಳು ಜರುಗಲಿವೆ. ಲಚ್ಯಾಣದ ಸಂಜೀವಕುಮಾರ ಅಂಕಲಗಿ ದಂಪತಿಗಳಿಂದ ಉಡಿ ತುಂಬುವ ಕಾರ್ಯಕ್ರಮ, ಪ್ರತಿನಿತ್ಯ ಭಕ್ತರಿಂದ ಅನ್ನದಾಸೋಹ ನಡೆಯಲಿದೆ ಎಂದು ಪ್ರಭುಲಿಂಗೇಶ್ವರ ಸಂಸ್ಥಾನ ವಿರಕ್ತಮಠವು ಪ್ರಕಟಣೆಯಲ್ಲಿ ತಿಳಿಸಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST