LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವರ್ಗಾವಣೆ ದಂಧೆಯಲ್ಲಿ ಯತೀಂದ್ರ ತೊಡಗಿದ್ದಾರೆ: ಪ್ರತಾಪ್ ಸಿಂಹ

ಪ್ರಜಾಸ್ತ್ರ ಸುದ್ದಿ

ಮೈಸೂರು(Mysore): ರಾಜ್ಯ ಸರ್ಕಾರದ ಆಡಳಿತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ ಹಸ್ತಕ್ಷೇಪ ಜೋರಾಗಿದೆ. ಎಲ್ಲದರಲ್ಲೂ ಅವರ ಹಸ್ತಕ್ಷೇಪ ನಡೆಯುತ್ತಿದೆ ಅನ್ನೋ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ್ ಕಿಡಿ ಕಾರಿದ್ದು, ಯತೀಂದ್ರ ಅವರಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಲೆ ತಗ್ಗಿಸುವಂತಾಗುತ್ತಿದೆ. ರಾಕೇಶ್ ಬದುಕಿದ್ದರೆ ಹೀಗೆ ಆಗುತ್ತಿರಲಿಲ್ಲ. ಯತೀಂದ್ರ ವರ್ಗಾವಣೆಯ ಅನಧಿಕೃತ ಸಚಿವರು ಎಂದು ಹೇಳಿದ್ದಾರೆ.

ಅಪ್ಪನ ಅಧಿಕಾರವನ್ನು ಅತಿ ಹೆಚ್ಚು ದುರುಪಯೋಗ ಪಡೆಸಿಕೊಳ್ಳುತ್ತಿದ್ದಾರೆ. ಯತೀಂದ್ರ ಸೇಲ್ಸ್ ಟ್ಯಾಕ್ಸ್ ರಾಜ್ಯದಲ್ಲಿ ಕಡ್ಡಾಯವಾಗಿದೆ. ಯಾರಿಗಾಗಿ ಇಷ್ಟೊಂದು ಆಸ್ತಿ ಮಾಡುತ್ತಿದ್ದೀರಿ? ನಿಮ್ಮ ಸಹೋದರನ ಕುಟುಂಬ ಸಹ ಸ್ಥಿತಿವಂತರಿದ್ದಾರೆ. ಮನೆ, ತೋಟ, ಆಸ್ತಿ ಎಲ್ಲಾ ಇದೆ. ಎಲ್ಲರನ್ನು ಗದರಿಸುವ ಸಿದ್ದರಾಮಯ್ಯನವರು ಮಗನನ್ನು ಗದರಿಸಲು ಆಗುತ್ತಿಲ್ಲ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ವರ್ಷದಲ್ಲಿ ಮೂರು ದಿನ ಕಾಣಿಸಿಕೊಳ್ಳುತ್ತಾರೆ. ಇಲ್ಲಿ ವರ್ಗಾವಣೆ ದಂಧೆ ಜೋರಾಗಿ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST