LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಟ ಜಯಸೂರ್ಯ ಹಾಗೂ ಮಣಿಯನ್ ವಿರುದ್ಧ ಅತ್ಯಾಚಾರ ದೂರು

ಪ್ರಜಾಸ್ತ್ರ ಸುದ್ದಿ

ತಿರುವನಂತಪುರಂ(thiruvananthapuram): ಮಲಯಾಳಂ ಚಿತ್ರರಂಗದಲ್ಲಿ(Mollywood) ನಟಿಯರು, ಸಹ ನಟಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎನ್ನುವ ಪ್ರಕರಣ ಸಂಬಂಧ ಮತ್ತಿಬ್ಬರು ನಟರ ಮೇಲೆ ಎಫ್ಐಆರ್ ದಾಖಲಾಗಿದೆ. ನಟರಾದ ಜಯಸೂರ್ಯ ಮತ್ತು ಮಣಿಯನ್ ಪಿಳ್ಳ ರಾಜು ವಿರುದ್ಧ ದೂರು ದಾಖಲಾಗಿದೆ. ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ನಟಿ ನೀಡಿದ ದೂರಿನ ಮೇಲೆ ಎಫ್ಐಆರ್(FIR) ಆಗಿದೆ.

ಇವರ ಜೊತೆಗೆ ನಟ ಮುಖೇಶ್, ಇಡವೇಲ ಬಾಬು, ಪ್ರೊಡಕ್ಷನ್ ಕಂಟ್ರೋಲರ್ ನೋಬಲ್ ಸೇರಿ ಇತರರ ವಿರುದ್ಧ ಸಹ ಆರೋಪ ಮಾಡಿದ್ದಾರೆ. ತಿರುವನಂತಪುರಂನ ಕಂಟೋನ್ಮೆಂಟ್ ದಿ ಪೋರ್ಟ್ ಕೊಚ್ಚಿ ಪೊಲಿಸ್ ಠಾಣೆಯಲ್ಲಿ ಐಪಿಎಸ್ ಸೆಕ್ಷನ್ 354ರ ಅಡಿ ದೂರು ದಾಖಲಾಗಿದೆ. 2013ರಲ್ಲಿ ನಾನು ಸಿನಿಮಾವೊಂದರಲ್ಲಿ ನಟಿಸುವ ವೇಳೆ ಲೈಂಗಿಕ(sexual assault) ದೌರ್ಜನ್ಯವೆಸಗಲಾಗಿದೆ ಎಂದಿದ್ದಾರೆ.

ಈ ಪ್ರಕರಣ ಸಂಬಂಧ ಕೇರಳ ಸರ್ಕಾರ ಈಗಾಗ್ಲೇ ಎಸ್ಐಟಿ(SIT) ರಚನೆ ಮಾಡಿದೆ. ಕೇರಳ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಟ ಮೋಹನ್ ಲಾಲ್ ಸೇರಿದಂತೆ ಸರ್ವಸದಸ್ಯರು ರಾಜೀನಾಮೆ ಸಲ್ಲಿಸಿದ್ದಾರೆ. ಹೀಗಾಗಿ ಇಡೀ ಪ್ರಕರಣ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ತನಿಖೆ ನಡೆಯುತ್ತಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST