LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಿಷಬ್ ಶೆಟ್ಟಿ ಅತ್ಯುತ್ತಮ ನಟ, ಕೆಜಿಎಫ್-2 ಅತ್ಯುತ್ತಮ ಸಿನಿಮಾ

ಪ್ರಜಾಸ್ತ್ರ ಸುದ್ದಿ

ಕಾಂತಾರ(kantara) ಸಿನಿಮಾದ ಮೂಲಕ ಸಖತ್ ಸೌಂಡ್ ಮಾಡಿದ ನಟ ರಿಷಬ್(rishab shetty) ಶೆಟ್ಟಿಗೆ 2024ನೇ ಸಾಲಿನ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಜೊತೆಗೆ ಕೆಜಿಎಫ್ ಸಿನಿಮಾ ಮೂಲಕ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿದ ನಟ ಯಶ್(Yash) ನಟನೆಯ ಕೆಜಿಎಫ್-2(KGF-2)ಸಿನಿಮಾ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದಿದೆ. 2022ರ ಸಾಲಿನ ಚಿತ್ರಗಳ ಪ್ರಶಸ್ತಿಯನ್ನು ಕೇಂದ್ರ ವಾರ್ತಾ ಪ್ರಸಾರ ಮತ್ತು ಮಾಹಿತಿ ಸಚಿವಾಲಯ ಶುಕ್ರವಾರ ಪ್ರಕಟಿಸಿದೆ. ಕೋವಿಡ್ ಕಾರಣಕ್ಕೆ 2023ರಲ್ಲಿ ಪ್ರಕಟವಾಗಬೇಕಿದ್ದ ಪ್ರಶಸ್ತಿ ಇದೀಗ ಪ್ರಕಟಿಸಲಾಗಿದೆ.

ಇನ್ನು ಜನಪ್ರಿಯ ಹಾಗೂ ಮನರಂಜನಾ ವಿಭಾಗದಲ್ಲಿಯೂ ಕಾಂತಾರ ಸಿನಿಮಾ ಪ್ರಶಸ್ತಿ ಪಡೆದಿದೆ. ಕೆಜಿಎಫ್-2 ಅತ್ಯುತ್ತಮ ನಿರ್ದೇಶನ ಹಾಗೂ ಅತ್ಯುತ್ತಮ ಸಾಹಸ ನಿರ್ದೇಶನ ಪ್ರಶಸ್ತಿ ಸಹ ಪಡೆದುಕೊಂಡಿದೆ. ಈ ಮೂಲಕ ಕನ್ನಡದ ಅಂಗಳದ ಮೂಲಕ ಭಾರತೀಯ ಸಿನಿ ರಂಗದಲ್ಲಿ ಹೊಸ ಅಲೆ ಎಬ್ಬಿಸಿದ ಎರಡು ಸಿನಿಮಾಗಳಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ಸಿಕ್ಕಿದೆ.



ಮಲಯಾಳಂನಲ್ಲಿ ‘ಅಟ್ಟಂ’ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದಿದೆ. ನಿತ್ಯ ಮೆನೆನ್(nithya menon) ಹಾಗೂ ಮಾನಸಿ ಪರೇಖಾ(manasi parekh) ಅವರು ತಿರುಚಿತ್ರಂಭಲಂ ಸಿನಿಮಾದಲ್ಲಿ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಹಲವು ವಿಭಾಗಗಳಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಚಿತ್ರ, ಕಲಾವಿದರ ಹೆಸರುಗಳನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST