ಪ್ರಜಾಸ್ತ್ರ ಸುದ್ದಿ
ಸ್ಯಾಂಡಲ್ ವುಡ್ ಸೆಂಚುರಿಸ್ಟಾರ್ ನಟ ಶಿವರಾಜಕುಮಾರ ಹಾಗೂ ಡಾಲಿ ಧನಂಜಯ ಲೀಡ್ ರೋಲ್ ನಲ್ಲಿರುವ 666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾದ ಟೀಸರ್ ಶುಕ್ರವಾರ ಸಂಜೆ ರಿಲೀಸ್ ಆಗಿದೆ. ಶಿವಣ್ಣ ಹಾಗೂ ಡಾಲಿ ಧನಂಜಯ ರೆಟ್ರೋ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಪತ್ತೆದಾರಿ ಕಥೆಯನ್ನು ಹೊಂದಿರುವ ಸಿನಿಮಾ ಇದಾಗಿದೆ. ಸ್ಟಾರ್ ನಟ ಲುಕ್ ಗೆ ಅಭಿಮಾನಿಗಳು ಖುಷಿಯಾಗಿದ್ದಾರೆ.
ಏಜೆಂಟ್ ಪ್ರಕಾಶನಾಗಿ ನಟ ಶಿವರಾಜಕುಮಾರ, ಏಜೆಂಟ್ ಶಂಕರನಾಗಿ ಡಾಲಿ ಧನಂಜಯ ಕಾಣಿಸಿಕೊಂಡಿದ್ದಾರೆ. ಟೀಸರ್ ನೋಡಿದವರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಟಗರು ಸಿನಿಮಾದಲ್ಲಿ ಶಿವಣ್ಣ-ಧನಂಜಯ ಕಾಣಿಸಿಕೊಂಡಿದ್ದರು. ಅಲ್ಲಿ ಹೀರೋ, ವಿಲನ್ ಆಗಿದ್ದರು. ಇಲ್ಲಿ ಜೊತೆಗಾರರಾಗಿದ್ದಾರೆ. ಹೇಮಂತ್.ಎಂ ರಾವ್ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ವೈಶಾಖ.ಜೆ ಗೌಡ ಅವರು ವೈಶಾಖ ಜೆ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.



