LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಸಿಂದಗಿ ನಂಬರ್ 1 ಆಗಬೇಕು: ಶ್ರೀಶೈಲಗೌಡ ಬಿರಾದಾರ

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ದೇಶದಾದ್ಯಂತ ನಡೆಯುತ್ತಿರುವ ಬಿಜೆಪಿ ಸದಸ್ಯತ್ವ ಅಭಿಯಾನದ ಭಾಗವಾಗಿ ಪಟ್ಟಣದ ಬಜಾರ್ ಲೈನ್ ಮತ್ತು ವಿವಿಧ ವಾರ್ಡ್ ಸೇರಿದಂತೆ ಚಿಕ್ಕಸಿಂದಗಿ ಗ್ರಾಮದಲ್ಲಿ ಬಿಜೆಪಿ  ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಾ  ನೇತೃತ್ವದಲ್ಲಿ ಸದಸ್ಯತ್ವ ಅಭಿಯಾನ ನಡೆಸಲಾಯಿತು. ಗ್ರಾಮದ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಗ್ರಾಮಸ್ಥರಿಂದ ಬಿಜೆಪಿ ಸದಸ್ಯತ್ವ ನೋಂದಣಿ ಮಾಡಿಕೊಂಡು ಮಾತನಾಡಿದ ಶ್ರೀಶೈಲಗೌಡ ಅವರು, ಬಿಜೆಪಿ ಸದಸ್ಯತ್ವ ಅಭಿಯಾನ ಸಮಿತಿಯ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪರಿಷತ್ ವಿಪಕ್ಷ ನಾಯಕ ಚಲುವರಾಯಸ್ವಾಮಿ ಸೇರಿದಂತೆ ಸಿಂದಗಿ ಮಾಜಿ ಶಾಸಕ ರಮೇಶ ಭೂಸನೂರ ಅವರ ಮಾರ್ಗದರ್ಶನದಲ್ಲಿ ಸದಸ್ಯತ್ವ ಅಭಿಯಾನ ಮಾಡುತ್ತಿದ್ದೆವೆ ಎಂದರು.



ಸದಸ್ಯತ್ವ ಅಭಿಯಾನದಲ್ಲಿ ಯಲಹಂಕ ಕ್ಷೇತ್ರ ದೇಶದಲ್ಲಿ ಹೇಗೆ ಪ್ರಥಮ ಸ್ಥಾನ ಪಡೆದಿದೆಯೊ ಹಾಗೆಯೇ ಸಿಂದಗಿ ಕ್ಷೇತ್ರದಲ್ಲಿ ಅತಿ ಹೆಚ್ಚು ಬಿಜೆಪಿ ಸದಸ್ಯತ್ವ ಮಾಡಿಸಿ ರಾಜ್ಯಕ್ಕೆ ಸಿಂದಗಿಯನ್ನ ಮೊದಲ ಸ್ಥಾನದತ್ತ ಕರೆದೊಯ್ಯುವ ಗುರಿಯೊಂದಿಗೆ ಅಭಿಯಾನ ಮಾಡುತ್ತಿದ್ದು ಕ್ಷೇತ್ರದ ಜನರು ಸಹಕರಿಸಬೇಕು ಎಂದು ಮನವಿ  ಮಾಡಿಕೊಂಡರು. ಗ್ಯಾರಂಟಿ ಹೆಸರಿನಲ್ಲಿ ಅಧಿಕಾರ ಗಿಟ್ಟಿಸಿಕೊಂಡು ಜನ ವಿರೋಧಿ ಆಡಳಿತ ಮತ್ತು ಸಿಎಂ ಸೇರಿದಂತೆ ಎಲ್ಲರೂ ಭ್ರಷ್ಟಾಚಾರ ಮಾಡುವಲ್ಲಿ ನಿರತರಾಗಿದ್ದಾರೆ. ಸಿಎಂ ಸಿದ್ದರಾಮಯ್ಯರ ನಡೆ ಕಂಡು ರಾಜ್ಯದ ಜನ ಅಸಹ್ಯ ಪಡುತ್ತಿದ್ದಾರೆ ಅಂತಾ ವಾಗ್ದಾಳಿ ನಡೆಸಿದರು. ಈ ವೇಳೆ ಬಿ.ಎಚ್ ಬಿರಾದಾರ, ಮಲ್ಲಣ ಮನಗೂಳಿ, ಮಲ್ಲಯ್ಯ ಹೀರೆಮಠ, ಗಂಗಾಧರ ಸಿವಸಿಂಪಿಗೇರ, ಎಮ್.ಡಿ ಪಾಟೀಲ, ಗೊಲ್ಲಾಳಪಗೌಡ ಬಿರಾದಾರ, ಅರವಿಂದಗೌಡ ಬಿರಾದಾರ, ಶಂಕರಲಿಂಗ ನಂದಗೇರಿ, ಆನಂದ ಪವಾರ, ಶಿವರಾಜ ಗಿರಿಗೌಡರ, ಎಸ್.ಆರ್ ಪಾಟೀಲ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಗ್ರಾಮಸ್ಥರು ಭಾಗವಹಿಸಿದ್ದರು.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST