LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಿಂದಗಿ: ಆಹೇರಿ ವಿದ್ಯುತ್ ಘಟಕದ ಮುಂದೆ ಗ್ರಾಮಸ್ಥರ ಪ್ರತಿಭಟನೆ

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಪದೆಪದೆ ವಿದ್ಯುತ್ ಸಮಸ್ಯೆಯಿಂದಾಗಿ ತಾಲೂಕಿನ ಆಹೇರಿ ಗ್ರಾಮಸ್ಥರು ಗ್ರಾಮದ ಹತ್ತಿರ ಇರುವ ವಿದ್ಯುತ್ ಘಟಕದ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು. ಪಕ್ಕದ ಇತರೆ ಗ್ರಾಮಗಳಿಗೆ ವಿದ್ಯುತ್ ಸಮಸ್ಯೆ ಇಲ್ಲ. ಆದರೆ, ಆಹೇರಿ ಗ್ರಾಮದಲ್ಲಿ ಮಾತ್ರ ಪದೆಪದೆ ವಿದ್ಯುತ್ ಸಮಸ್ಯೆಯಾಗುತ್ತಿದೆ. ಸಂಬಂಧಿಸಿದವರಿಗೆ ಕೇಳಿದರೆ ಡ್ರಿಪ್ ಆಗುತ್ತಿದೆ ಎಂದು ಹೇಳುತ್ತಿದ್ದಾರೆ ಅಂತಾ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಹೊಲಗಳಿಗೆ ಒಂದು ದಿನಕ್ಕೆ 7 ಗಂಟೆ ವಿದ್ಯುತ್ ನೀಡಬೇಕು. ಆದರೆ, 7 ಗಂಟೆ ವಿದ್ಯುತ್ ನೀಡದೆ 4 ರಿಂದ 5 ಗಂಟೆ ನೀಡಲಾಗುತ್ತಿದೆ. ಇದರಿಂದಾಗಿ ರೈತರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಕೆಇಬಿ ಎಇಇ ಸಿ.ಡಿ ನಾಯ್ಕ ಅವರ ಮುಂದೆ ಗ್ರಾಮಸ್ಥರು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು. ಆಹೇರಿ ಗ್ರಾಮದಲ್ಲಿಯೇ ವಿದ್ಯುತ್ ಘಟಕವಿದ್ದರೂ ಸರಿಯಾಗಿ ವಿದ್ಯುತ್ ಸಿಗುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.

ಈ ವೇಳೆ ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿದ ಕೆಇಬಿ ಎಇಇ ಸಿ.ಡಿ ನಾಯ್ಕ ಅವರು ಸಮಸ್ಯೆ ಬಗೆ ಹರಿಸುವ ಕುರಿತು ಭರವಸೆ ನೀಡಿದರು. ಆದರೆ, ಆಹೇರಿ ಗ್ರಾಮಕ್ಕೆ ಪ್ರತ್ಯೇಕವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಅನ್ನೋ ಬೇಡಿಕೆಯನ್ನು ಗ್ರಾಮಸ್ಥರು ಇಟ್ಟಿದ್ದಾರೆ. ಈ ವೇಳೆ ಗ್ರಾಮಸ್ಥರಾದ ಗಂಗಣ್ಣಗೌಡ ಕಡಗಂಚಿ, ಭಾಗಣ್ಣಗೌಡ ಬಿರಾದಾರ, ಬಸನಗೌಡ ಬಿರಾದಾರ, ದೇವುಗೌಡ ಬಿರಾದಾರ, ಶಂಕರ ಬಡಗೇರ, ರವಿ ಪೀರಶೆಟ್ಟಿ, ಗಂಗಾಧರ ಗೊಬ್ಬುರ, ಹಣಮಂತ ಪೀರಶೆಟ್ಟಿ, ಪ್ರವೀಣ ಜವಳಗಿ, ಶ್ರೀಶೈಲ ಹಡಪದ, ಭಾಗಣ್ಣ ಬಿರಾದಾರ, ಭಾಗಣ್ಣ ಗೊಬ್ಬುರ, ಕಲ್ಲನಗೌಡ ಬಿರಾದಾರ, ಸದ್ದಾಂ ದುಮ್ಮಾದ್ರಿ, ರಾಜು ಭಾವಿಮನಿ, ಭಾಗಣ್ಣಗೌಡ ಹೂನಳ್ಳಿ ಸೇರಿದಂತೆ ಇತರರು ಭಾಗವಹಿಸಿದ್ದರು.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST