LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವೆನೆಜುವೆಲಾದಲ್ಲಿ ಪ್ರಬಲ ಭೂಕಂಪ, ಅಪಾರ ಸಾವು, ನೋವು

ಪ್ರಜಾಸ್ತ್ರ ಸುದ್ದಿ

ಕ್ಯಾರಕಾಸ್(Caracas): ವೆನೆಜುವೆಲಾದಲ್ಲಿ(Venezuela) ಗುರುವಾರ 40 ಸೆಕೆಂಡ್ ಅಂತರದಲ್ಲಿ 2 ಬಾರಿ ಪ್ರಬಲ ಭೂಕಂಪನವಾಗಿದ್ದು, ಅಪಾರ ಪ್ರಮಾಣದ ಸಾವು, ನೋವು ಸಂಭವಿಸಿದೆ. ಈ ಘಟನೆಯಿಂದ ಇಡೀ ದೇಶವೇ ಆತಂಕಕ್ಕೆ ಒಳಗಾಗಿದೆ. ಮೊದಲು 7.2 ತೀವ್ರತೆಯ ಭೂಕಂಪನ ಸಂಭವಿಸಿದೆ. ಇದಾದ 40 ಸೆಕೆಂಡ್ ಗಳಲ್ಲಿ 7.5 ತೀವ್ರತೆಯ ಭೂಕಂಪನವಾಗಿದೆ.

ಇನ್ನೊಂದು ಕಡೆ ಜಪಾನಿನಲ್ಲಿ 6.9 ಹಾಗೂ ಅಮೆರಿಕದಲ್ಲಿ 5.6 ತೀವ್ರತೆಯ ಭೂಕಂಪನವಾಗಿದೆ. ಒಂದೇ ದಿನದಲ್ಲಿ 3 ದೇಶದಲ್ಲಿ ಭೂಮಿ ಕಂಪಿಸಿದೆ. ಇದು ಒಂದುಕೊಂದು ಸಂಬಂಧವಿದೆಯಾ ಅನ್ನೋದು ತಿಳಿದು ಬರಬೇಕಿದೆ. ಸಧ್ಯದ ಮಾಹಿತಿ ಪ್ರಕಾರ ವೆನೆಜುವೆಲಾದಲ್ಲಿ 32 ಜನರು ಮೃತಪಟ್ಟಿದ್ದಾರೆ. ಅಂದಾಜು 10 ಸಾವಿರ ಜನರು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಇದೆಲ್ಲಕ್ಕಿಂತ ಆಘಾತಕಾರಿ ಅಂದರೆ ಸಾವಿನ ಸಂಖ್ಯೆ 1 ಲಕ್ಷ ದಾಟಬಹುದು ಎನ್ನಲಾಗುತ್ತಿದೆ.

ಭಾರತದ ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಟ್ರಂಪ್ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳ ನಾಯಕರು ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆ. ರಕ್ಷಣಾ ತಂಡದಿಂದ ಅವಶೇಷಗಳಡಿಯಲ್ಲಿ ಸಿಲುಕಿರುವವರ ರಕ್ಷಣೆ ಮಾಡುವ ಕಾರ್ಯ ನಡೆದಿದೆ. ಭಯಾನಕ ಭೂಕಂಪನಕ್ಕೆ ವೆನೆಜುವೆಲಾ ತತ್ತರಿಸಿ ಹೋಗಿದೆ.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST