ಪ್ರಜಾಸ್ತ್ರ ಸುದ್ದಿ
ಹನೋಯಿ(Vietnam): ಫೂ ಕ್ವೋಕ್ ದ್ವೀಪದ ಹತ್ತಿರ ದೋಣಿ ಮಗುಚಿದ ಪರಿಣಾಮ 15 ಭಾರತೀಯ ಪ್ರವಾಸಿಗರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ದೋಣಿಯಲ್ಲಿ 32 ಭಾರತೀಯರು, ನಾಲ್ವರು ಸಿಬ್ಬಂದಿ ಇದ್ದರು. ಉಳಿದವರ ರಕ್ಷಣಾ ಕಾರ್ಯಾಚರಣೆ ನಡೆದಿದೆ ಎಂದು ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಪ್ರವಾಸಿಗರನ್ನು ಕರೆದುಕೊಂಡು ಹಾನ್ ಮಿ ರುಡ್ ದ್ವೀಪದಿಂದ ಆನ್ ಥೋಯ್ ಬಂದರುವರೆಗೆ ಹೋಗುತ್ತಿದ್ದ ಸ್ಪೀಡ್ ಬೋಟ್ ಮಗುಚಿದೆ. ಸಮುದ್ರದಲ್ಲಿ ಭಾರಿ ಪ್ರಮಾಣದ ಅಲೆಗಳು ಎದ್ದ ಪರಿಣಾಮ ರಕ್ಷಣಾ ಕಾರ್ಯಕ್ಕೆ ಒಂದಿಷ್ಟು ಸಮಸ್ಯೆ ಎದುರಾಗಿದೆ. ಫು ಕ್ವಾಕ್ ವಿಯೆಟ್ನಾಂನ ಅತಿದೊಡ್ಡ ದ್ವೀಪವಾಗಿದೆ. ಇದು ಹೆಚ್ಚಿನ ಪ್ರವಾಸಿಗರ ಆಕರ್ಷಕ ತಾಣವಾಗಿದೆ. ಘಟನೆ ಕುರಿತು ಮಾಹಿತಿ ಪಡೆಯಲು ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.



