ಪ್ರಜಾಸ್ತ್ರ ಸುದ್ದಿ
ಪೇಶಾವರ(Peshawar): ಸೇನಾ ಸಿಬ್ಬಂದಿ ಇದ್ದ ರೈಲಿಗೆ ಸ್ಫೋಟಕ ತುಂಬಿದ ಕಾರನ್ನು ಡಿಕ್ಕಿ ಹೊಡೆಸುವ ಮೂಲಕ ರೈಲು ಸ್ಫೋಟಿಸಿದ ಘಟನೆ ಭಾನುವಾರ ಮುಂಜಾನೆ ನಡೆದಿದೆ. ರಾಜಧಾನಿ ಕ್ವೆಟ್ಟಾದ ಚಮನ್ ಪಟ್ಟಾಕ್ ನಲ್ಲಿ ರೈಲು ಸಿಗ್ನಲ್ ದಾಟುತ್ತಿದ್ದಾಗ ಈ ಕೃತ್ಯ ನಡೆದಿದೆ. ಸೇನಾ ಸಿಬ್ಬಂದಿ ಸೇರಿ 24 ಜನರು ಮೃತಪಟ್ಟಿದ್ದಾರೆ. 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ನಡೆದ ಪ್ರದೇಶದಲ್ಲಿದ್ದ 10ಕ್ಕೂ ಹೆಚ್ಚು ವಾಹನಗಳಿಗೆ ಹಾನಿಯಾಗಿದೆ. ಅಲ್ಲದೆ ಸಮೀಪದ ಮನೆಯ ಕಿಟಕಿ, ಗಾಜುಗಳ ಒಡೆದು ಹೋಗಿವೆ. ರೈಲಿನ ಬೋಗಿ ಸಂಪೂರ್ಣ ಹಾನಿಯಾಗಿದ್ದು ಗಾಯಗೊಂಡವರನ್ನು ರಕ್ಷಿಸುವ ಕೆಲಸ ನಡೆದಿದೆ. ಈದ್ ಹಬ್ಬ ಆಚರಿಸಲು ಸೇನಾ ಸಿಬ್ಬಂದಿ ಹಾಗೂ ಕುಟುಂಬಸ್ಥರು ಹೊರಟಿದ್ದರಂತೆ. ಪೇಶಾವರಕ್ಕೆ ಹೊರಟಿದ್ದ ಜಾಫರ್ ಎಕ್ಸ್ ಪ್ರೆಸ್ ರೈಲನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕ್ವೆಟ್ಟಾ ರೈಲು ನಿಲ್ದಾಣದಲ್ಲಿಯೇ ನಿಲ್ಲಿಸಲಾಗಿದೆ.



