ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಆಸ್ಟ್ರೇಲಿಯಾದೊಂದಿಗೆ ಪರಮಾಣ ಇಂಧನ, ಕಡಲ ಭದ್ರತೆ, ಖನಿಜ ಸಂಪನ್ಮೂಲ ಸೇರಿದಂತೆ ಕ್ಷೇತ್ರಗಳಿಗೆ ಭಾರತದೊಂದಿಗೆ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಮಾಡಲಾಗಿದೆ. ಭಾರತ ಪ್ರಧಾನಿ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಒಪ್ಪಂದಗಳಿಗೆ ಸಹಿ ಮಾಡಿದ್ದಾರೆ.
ಪರಮಾಣ ಸಹಕಾರ ಕ್ಷೇತ್ರದಲ್ಲಿ ನಾವು ಒಪ್ಪಂದ ಮಾಡಿಕೊಂಡಿದ್ದೇವೆ. ಆಸ್ಟ್ರೇಲಿಯಾದಿಂದ ಭಾರತಕ್ಕೆ ಯುರೇನಿಯಂ ಪೂರೈಕೆಗೆ ಅವಕಾಶವಾಗಲಿದೆ. ಇದಿರಿಂದ ನಮ್ಮ ಶುದ್ಧ ಇಂಧನ ಉದ್ದೇಶಗಳಿಗೆ ಹೊಸ ಚೈತನ್ಯ ಸಿಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಕಡಲ ಭದ್ರತೆ ಒಪ್ಪಂದೊಂದಿಗೆ ಇಂಡೋ-ಫೆಸಿಫಿಕ್ ಪ್ರದೇಶದಲ್ಲಿನ ಜಂಟಿ ಪ್ರಯತ್ನಗಳಿಗೆ ಮತ್ತಷ್ಟು ಹೆಚ್ಚಿನ ವೇಗ ಸಿಗಲಿದೆ. ಹಡಗು ದುರಸ್ಥಿ, ಹಡಗು ನಿರ್ಮಾಣ, ನಿರ್ವಹಣೆಯಲ್ಲೂ ಜೊತೆಗೆ ಮುನ್ನಡೆಯಲ್ಲಿದ್ದೇವೆ. ಭಾರತದಲ್ಲಿ ಹೂಡಿಕೆ ಮಾಡುವಂತೆ ಆಸ್ಟ್ರೇಲಿಯಾದ ಉದ್ಯಮಿಗಳಿಗೆ ಆಹ್ವಾನ ನೀಡಿದ್ದಾರೆ. ದ್ವಿಪಕ್ಷೀಯ ಒಪ್ಪಂದಿಂದ ಜೊತೆಯಾಗಿ ಕೆಲಸ ಮಾಡಲಿದ್ದೇವೆ ಎಂದಿದ್ದಾರೆ.



