ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಗುಮ್ಮಟನಗರಿ ವಿಜಯಪುರದಲ್ಲಿ ಯುವಕನ ಭೀಕರ ಹತ್ಯೆ ಮಾಡಲಾಗಿದೆ. ನಗರದ ಸ್ಟೇಷನ್ ರಸ್ತೆಯಲ್ಲಿರುವ ಚಪ್ಪರ ಬಂದ್ ಗಲ್ಲಿಯಲ್ಲಿ ಯುವಕನಿಗೆ ಚಾಕು ಇರಿದು, ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ. 35 ವರ್ಷದ ಉಮರಸಾಬ್ ಪಟೇಲ್ ಮೃತ ಯುವಕನೆಂದು ತಿಳಿದು ಬಂದಿದೆ. ಆಟೋ ಚಾಲಕನಾಗಿದ್ದ ಉಮರಸಾಬ್ ಕೊಲೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ.
ಈ ಕೃತ್ಯ ಯಾರು ಎಸಗಿದ್ದಾರೆ ಅನ್ನೋದು ಸಧ್ಯಕ್ಕೆ ತಿಳಿದಿಲ್ಲ. ಸ್ಥಳಕ್ಕೆ ಗೋಲ್ ಗುಮ್ಮಜ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಬಂದು ದುಷ್ಕರ್ಮಿಗಳ ಸುಳಿವು ಪತ್ತೆ ಕೆಲಸ ನಡೆಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಕೊಲೆಯಾದ ಯುವಕನ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಮೃತನಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಈ ಘಟನೆಯಿಂದ ನಗರದಲ್ಲಿ ಆತಂಕ ಮೂಡಿದೆ.



