ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಬಿಎಂಟಿಸಿಗೆ ಸೇರಿದ ವಾಯುವಜ್ರ ಹಾಗೂ ಇವಿ ಬಸ್ ನಡುವೆ ಶನಿವಾರ ಮುಂಜಾನೆ ಕೆ.ಆರ್ ಸರ್ಕಲ್ ಬಳಿ ಅಪಘಾತ ಸಂಭವಿಸಿದೆ. ಇದರಿಂದಾಗಿ 8 ಜನರು ಗಾಯಗೊಂಡಿದ್ದಾರೆ. ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಸ್ಥಳೀಯರು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸುಮಾರು 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರು.
ಕಲಬುರಗಿ ಮೂಲದ ಭಾಗ್ಯಮ್ಮ ಅನ್ನೋ ಯುವತಿಯ ಕಾಲು ಸಿಲುಕಿ ನರಳುತ್ತಿದ್ದವರು. ಅವರನ್ನು ರಕ್ಷಿಸಲಾಗಿದೆ. ಗಾಯಾಳುಗಳನ್ನು ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿ ಚಿಕಿತ್ಸೆ ವ್ಯವಸ್ಥೆ ದುಬಾರಿಯಾಗಿದೆ. ನಮ್ಮಿಂದ ಭರಿಸಲು ಆಗುವುದಿಲ್ಲ. ಬಿಎಂಟಿಸಿ ಕಡೆಯಿಂದಲೇ ಚಿಕಿತ್ಸೆ ವೆಚ್ಚ ಭರಿಸಬೇಕು ಎಂದು ಮನವಿ ಮಾಡಿದ್ದಾರೆ. ಆಸ್ಪತ್ರೆಗೆ ಅಧಿಕಾರಿಗಳು ಭೇಟಿ ನೀಡಿದರು.
ಕೆ.ಆರ್ ವೃತ್ತದ ಬಳಿ ನಿಂತಿದ್ದ ಸಾಮನ್ಯ ಬಸ್ಸಿಗೆ ಇವಿ ಬಸ್ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದೆಯಂತೆ. ಮೇಲ್ನೋಟಕ್ಕೆ ಚಾಲಕನ ಅತಿಯಾದ ವೇಗ ಎಂದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.



