ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಜೂನ್ 30ರಂದು ದೇಶ್ಯಾದ್ಯಂತ ನಡೆದ ಯುಜಿಟಿ-ನೆಟ್ ಅರ್ಹತಾ ಪರೀಕ್ಷೆಯಲ್ಲಿ ಸಮಾಜಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ. ಈ ಕುರಿತು ತನಿಖೆಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ಪರೀಕ್ಷೆ ಶುರುವಾಗುವ ಕೆಲವು ಗಂಟೆಗಳ ಮೊದಲೇ ಪಿಡಿಎಫ್ ಫೈಲ್ ನ ಪ್ರಶ್ನೆ ಪತ್ರಿಕೆ ಬಂದಿದೆ ಎಂದು ಹರಿಯಾಣ ಮೂಲದ ವಿದ್ಯಾರ್ಥಿ ಸಂಘಟನೆ ಆರೋಪಿಸಿದೆ.
ಯುಜಿಸಿ-ನೆಟ್ ಪರೀಕ್ಷೆಗೂ ಕೆಲ ವಾರಗಳ ಮೊದಲು ಜಾಲವೊಂದು ನಮ್ಮನ್ನು ಸಂಪರ್ಕಿಸಿದೆ. ವಿವಿಧ ರಾಷ್ಟ್ರೀಯ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ನಮ್ಮ ಬಳಿ ಇವೆ ಎಂದು ಹೇಳಿಕೊಂಡಿದೆ. ಅವುಗಳನ್ನು ತಂದುಕೊಡುವುದಾಗಿ ಹೇಳಿದ್ದವು ಅಸೋಸಿಯೇಷನ್ ಆಫ್ ಸ್ಟೂಡೆಂಟ್ಸ್ ಫಾರ್ ಆಲ್ಟರ್ನೇಟಿವ್ ಪಾಲಿಟಿಕ್ಸ್ ಹರಿಯಾಣ ರಾಜ್ಯಾಧ್ಯಕ್ಷ ದೀಪಕ್ ಧನಕರ್ ಆರೋಪಿಸಿದ್ದಾರೆ.
ಈ ಕುರಿತು ಪ್ರಧಾನಿ ಹಾಗೂ ಶಿಕ್ಷಣ ಸಚಿವ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸೋರಿಕೆಯಾದ ಪ್ರಶ್ನೆಪತ್ರಿಕೆಯಲ್ಲಿ ಸುಮಾರು 90ರಷ್ಟು ಪ್ರಶ್ನೆಗಳು ಬಂದಿವೆ. ಇದು ಸಮಾಜಶಾಸ್ತ್ರ ಪ್ರಶ್ನೆಪತ್ರಿಕೆಗೆ ಹೊಂದಿಕೆಯಾಗುತ್ತವೆ. ಪದೆಪದೆ ಇಂತಹ ಘಟನೆಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಪರೀಕ್ಷೆಯ ವ್ಯವಸ್ಥೆಯ ಮೇಲಿನ ನಂಬಿಕೆಯೇ ಹೋಗಿದೆ ಎಂದು ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.



