LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಳ್ಳತನ ಮಾಡಿ ತಪ್ಪಾಯ್ತು ಅಂದಗಿದೆ: ಹೆಚ್ಡಿಕೆ

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಮುಡಾ(MUDA) ನಿವೇಶನ ಪ್ರಕರಣದಲ್ಲಿ ಕಾನೂನು ಹೋರಾಟ ನಡೆಯುತ್ತಿದೆ. ಇದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರು 14 ನಿವೇಶಗಳನ್ನು ವಾಪಸ್ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಹೆಚ್.ಡಿ(HDK) ಕುಮಾರಸ್ವಾಮಿ, ಕಳ್ಳತನ ಮಾಡಿ ತಪ್ಪಾಯ್ತು ಎನ್ನುವ ರೀತಿಯಲ್ಲಿದೆ ಎಂದು ಕುಟುಕಿದ್ದಾರೆ. ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ ಈ ರೀತಿ ಹೇಳಿದರು.

ಸಿದ್ದರಾಮಯ್ಯನವರು ಯಾವಾಗಲೂ ನನಗೆ ಹಿಟ್ ಅಂಡ್(Hit and Run) ರನ್ ಎನ್ನುತ್ತಿದ್ದವರು. ಅವರೇನು ಯೂ ಟರ್ನಾ ಎಂದು ಪ್ರಶ್ನಿಸಿದರು. ಅವರ ಪತ್ನಿ ನನಗೂ ಸಹೋದರಿ ಸಮಾನ. ಅವರ ಬಗ್ಗೆ ಗೌರವವಿದೆ. ಅವರ ಬಗ್ಗೆ ಮಾತನಾಡುವುದಿಲ್ಲ. ಮನೆ, ಒಡವೆ, ಚಿನ್ನ ಯಾವುದರೂ ಮೇಲೂ ಮಮತೆ ಇಲ್ಲ. ಪತಿಯ ಮುಂದೆ ಎಲ್ಲವೂ ತೃಣಕ್ಕೆ ಸಮ ಎಂದಿದ್ದಾರೆ. ಅವರು ಪತಿಯ ಗಮನಕ್ಕೆ ತರದೆ ನಿವೇಶನ ವಾಪಸ್ ಮಾಡಿದರಾ? ನನ್ನನ್ನು ಸುಳ್ಳುಗಾರ ಎನ್ನುತ್ತಿದ್ದರು. ಇವರು ಮಾತುಗಳನ್ನು ಕೇಳಿದರೆ ಸುಳ್ಳಿ ಎಲ್ಲಿ ಹುಟ್ಟಿದೆ ಅಂತಾ ತಿಳಿಯುತ್ತೆ ಎಂದು ಪರೋಕ್ಷವಾಗಿ ಸಿಎಂ(Siddaramaiah) ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST