LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹರಿಹರ ಪಂಚಮಸಾಲಿ ಪೀಠದಿಂದ ವಚನಾನಂದ ಶ್ರೀ ಉಚ್ಛಾಟನೆ

ಪ್ರಜಾಸ್ತ್ರ ಸುದ್ದಿ

ದಾವಣಗೆರೆ(Davanagere): ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಿಂದ ವಚನಾನಂದ ಶ್ರೀ ಅವರನ್ನು ಟ್ರಸ್ಟ್ ನವರು ಉಚ್ಛಾಟನೆ ಮಾಡಿದ್ದಾರೆ. ಸೋಮವಾರ ನಡೆದ ಸಭೆಯಲ್ಲಿ 15 ಜನ ಟ್ರಸ್ಟಿಗಳಲ್ಲಿ 13 ಜನರು ಪದಚ್ಯುತಿ ನಿರ್ಣಯ ತೆಗೆದುಕೊಂಡಿದ್ದಾರೆ.

ಬೆಂಗಳೂರಿನ ಶ್ವಾಸಯೋಗ ಪೀಠವನ್ನು ತ್ಯಜಿಸಬೇಕು ಎಂದು ಹಲವು ಬಾರಿ ಗಡವು ನೀಡಲಾಗಿತ್ತು. ಆದರೂ ಅವರು ಕೇಳಿಲ್ಲ. ಈ ಕುರಿತು ಯಾವುದೇ ಮಾಹಿತಿ ಸಹ ನೀಡಿಲ್ಲ. ಹೀಗಾಗಿ ಅವರನ್ನು ಪೀಠದಿಂದ ಪದಚ್ಯುತಿಗೊಳಿಸುವ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಟ್ರಸ್ಟಿಗಳು ಹೇಳಿದ್ದಾರೆ. ಇನ್ನೊಂದು ಕಡೆ ಮಠದ ಹೊರಗೆ ಟ್ರಸ್ಟಿಗಳ ವಿರುದ್ಧ ಲೆಕ್ಕ ಕೊಡಿ ಎಂದು ಮಠದ ಭಕ್ತರು ಆಗ್ರಹಿಸಿದರು. ಹೀಗಾಗಿ ಹೈಡ್ರಾಮಾ ನಡೆಯಿತು. ಈ ವೇಳೆ ಪೊಲೀಸ್ ಬಂದೋಬಸ್ತಿ ನೀಡಲಾಗಿತ್ತು.

ಇನ್ನು ಈ ಕುರಿತು ಮಾತನಾಡಿರುವ ವಚನಾನಂದ ಶ್ರೀ, ಟ್ರಸ್ಟ್ ನವರಿಗೆ ನಾನು ಲೆಕ್ಕ ಕೊಡಿ ಎಂದು ಕೇಳಿದೆ. ಹೀಗಾಗಿ ನನ್ನನ್ನು ಗುರಿ ಮಾಡಿದರು. ಉಚ್ಛಾಟನೆ ಮಾಡಲು ವ್ಯವಸ್ಥಿತಿ ಷಡ್ಯಂತ್ರ ಮಾಡಿದರು. ನನ್ನ ಉಚ್ಛಾಟನೆ ಹಾಸ್ಯಸ್ಪದ ಅಂತಾ ಹೇಳಿದ್ದಾರೆ. ಇದೆ ವೇಳೆ ಪೊಲೀಸರೊಂದಿಗೆ ವಚನಾನಂದ ಶ್ರೀ ಮಾತಿನ ಚಕಮಕಿ ನಡೆಸಿರುವ ಘಟನೆ ಸಹ ನಡೆದಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST