LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಂತ್ರಸ್ತೆ ತಾಯಿಯಿಂದ ಲಂಚ, ಎಎಸ್ಐ, ಪೇದೆ ಲೋಕಾ ಬಲೆಗೆ

ಪ್ರಜಾಸ್ತ್ರ ಸುದ್ದಿ

ಕಲಬುರಗಿ(Kalaburagi): ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ನೆರವು ನೀಡಬೇಕಾದ ಪೊಲೀಸರೆ ಸಂತ್ರಸ್ತೆಯ ತಾಯಿಯಿಂದ ಲಂಚ ಪಡೆಯುವ ವೇಳೆ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಸ್ಟೇಷನ್ ಬಜಾರ್ ಠಾಣೆಯ ಎಎಸ್ಐ ಶರಣಬಸಪ್ಪ ಹಾಗೂ ಮಹಿಳಾ ಪೇದೆ ಜ್ಯೋತಿ ಎಂಬುವರನ್ನು ಭಾನುವಾರ ಬಂಧಿಸಲಾಗಿದೆ.

ಸರ್ಕಾರಿ ವಕೀಲರಿಗೆ 1 ಸಾವಿರ ರೂಪಾಯಿ ಕೊಡಬೇಕು ಎಂದು ಪಡೆದುಕೊಂಡಿದ್ದರು. ಕಾನೂನು ನೆರವು ನೀಡಲು ತನಗೆ ಹಾಗೂ ಎಎಸ್ಐಗೆ ತಲಾ 5 ಸಾವಿರ ರೂಪಾಯಿ ಕೊಡಬೇಕು ಎಂದು ಮಹಿಳಾ ಪೇದೆ ಜ್ಯೋತಿ ಮಹಿಳೆಗೆ ಹೇಳಿದ್ದರು. ಇದರಿಂದ ಬೇಸತ್ತ ಮಹಿಳೆ ಲೋಕಾಯುಕ್ತರಿಗೆ ದೂರು ನೀಡಿದ್ದರು. 10 ಸಾವಿರ ರೂಪಾಯಿ ಪಡೆಯುವಾಗ ಲೋಕಾಯುಕ್ತರು ದಾಳಿ ಮಾಡಿದ್ದಾರೆ.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST