LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿಜಯಪುರ: 25 ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಜಿಲ್ಲೆಯ 25 ಸಾಧಕರನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ನವೆಂಬರ್ 1ರಂದು ನಡೆಯುವ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದು ಜಿಲ್ಲಾ ಆಯ್ಕೆ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ ಅವರು ತಿಳಿಸಿದ್ದಾರೆ. ಶುಕ್ರವಾರ ನಗರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತ ಪ್ರದಾನ ಮಾಡಲಾಗುವುದು.

ಶಿಲ್ಪಕಲಾ ಕ್ಷೇತ್ರದಲ್ಲಿ ಷಣ್ಮುಖಪ್ಪ ದೇವೇಂದ್ರಪ್ಪ ಪತ್ತಾರ, ಚಿತ್ರಕಲಾ ಕ್ಷೇತ್ರದಲ್ಲಿ ಹುಸೇನ ಹುನೇರ ಅಲಿಶಾ ಮಕಾನದಾರ, ಬಯಲಾಟ ಕ್ಷೇತ್ರದಲ್ಲಿ ಯಲ್ಲಪ್ಪ ಈರಪ್ಪ ಗೊಂದಳಿ, ಜಾನಪದ ಕ್ಷೇತ್ರದಲ್ಲಿ ಆದವ್ವ ಚಂದಪ್ಪ ಕದ್ರಿ, ಸಿದ್ದಪ್ಪ ಗುರುಪಾದಪ್ಪ ಆಲಗೊಂಡ (ಜೋಗತಿ) ಹಾಗೂ ಶಾಂತಾಬಾಯಿ ಲಚ್ಚು ನಾಯಕ, ಸಮಾಜ ಸೇವೆ ಕ್ಷೇತ್ರದಲ್ಲಿ  ಬಸವರಾಜ ಮಡಿವಾಳಪ್ಪ ಪಾಟೀಲ, ಮಹಾವೀರ ಭರಮಪ್ಪ ಸಗರಿ, ಚೆನ್ನಬಸಯ್ಯ ಸಿದ್ಧರಾಮಯ್ಯ ಹಿರೇಮಠ, ಶ್ರೀಕಾಂತ ದಶರಥ ಬಿರಾದಾರ, ಮಲ್ಲು ಸಾಬು ಬಿದರಿ ಹಾಗೂ ಸುರೇಶ ಸೋಮಲಿಂಗಪ್ಪ ಗೊಣಸಗಿ ಅವರನ್ನು ಆಯ್ಕೆ ಮಾಡಲಾಗಿದೆ.

ವೈದ್ಯಕೀಯ ಕ್ಷೇತ್ರದಲ್ಲಿ ಶಿವಾನಂದ ಸಿದ್ರಾಮಪ್ಪ ಜಂಗಿನಮಠ ಹಾಗೂ ಡಾ.ಬಾಬು ಬಸಪ್ಪ ಕುಚನೂರ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಯಲ್ಲಣ್ಣ ಸೊನ್ನದ, ಮೋಹನ ಪಾಂಡುರಂಗ ಕುಲಕರ್ಣಿ, ಬಸವರಾಜ ಶಂಕರ ಉಳ್ಳಾಗಡ್ಡಿ ಹಾಗೂ ಶ್ರೀಶೈಲ ಬಾಳಪ್ಪ ಕೊಟ್ಟಲಗಿ, ಸಾಹಿತ್ಯ ಕ್ಷೇತ್ರದಲ್ಲಿ ಬಿಂದುರಾವ ರಾಮರಾವ ನಾಡಗೌಡ ಹಾಗೂ ದಾಕ್ಷಾಯಿಣಿ ರಮೇಶ ಬಿರಾದಾರ, ರಂಗಭೂಮಿ ಕ್ಷೇತ್ರದಲ್ಲಿ ಮಹಾದೇವಪ್ಪ ಈರಪ್ಪ ಹುಣಶ್ಯಾಳ, ಶಿಕ್ಷಣ ಕ್ಷೇತ್ರದಲ್ಲಿ ಡಾ.ಮಲ್ಲಿಕಾರ್ಜುನ ಲಕ್ಷ್ಮಣ ವಡ್ಡರ ಹಾಗೂ ಶಿವಕುಮಾರ ಕುಡ್ಲೆಪ್ಪ ಬಾಗಿ, ಸಂಗೀತ ಕ್ಷೇತ್ರದಲ್ಲಿ ಶ್ರೀಕಾಂತ ವೀರಭದ್ರಪ್ಪ ಬಡಿಗೇರ ಮತ್ತು ಸಂಕೀರ್ಣ ಕ್ಷೇತ್ರದಲ್ಲಿ ಅವಲೇಸಾ ರಾಜೇಸಾ ಮುಲ್ಲಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST