ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಶನಿವಾರ ನಸುಕಿನಜಾವ ಜಿಲ್ಲೆಯ ಸಿಂದಗಿ ಹಾಗೂ ತಾಳಿಕೋಟೆ ತಾಲೂಕಿನಲ್ಲಿ ದಾಳಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಎರಡು ತಂಡಗಳಲ್ಲಿ ಬಂದ ಎನ್ಐಎ ಅಧಿಕಾರಿಗಳು ಶನಿವಾರ ಇಡೀ ದಿನ ದಾಖಲೆಗಳ ಪರಿಶೀಲನೆ ನಡೆಸಿದ್ದು, ಕೆಲವೊಂದಿಷ್ಟು ವಸ್ತುಗಳು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿಂದಗಿ ತಾಲೂಕಿನ ಗ್ರಾಮವೊಂದರ ಎರಡು ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಕೇರಳದ ಕೊಚ್ಚಿ ಮೂಲದ ಎನ್ಐಎ ತಂಡ ಸದ್ದಿಲ್ಲದೆ ಬಂದು ಹೋಗಿದೆ. ಸಿಂದಗಿ ತಾಲೂಕು ಆಡಳಿತದ ನಾಲ್ಕು ಸಿಬ್ಬಂದಿಯನ್ನು ಪಂಚನಾಮದ ಸಲುವಾಗಿ ಕರೆದುಕೊಂಡು ಹೋಗಿದ್ದು ಅವರಿಂದ ಸಹಿ ಪಡೆದಿದ್ದಾರಂತೆ. ಸಿಂದಗಿ ಪೊಲೀಸ್ ಠಾಣೆಯ ಪಿಎಸ್ಐ ಸೇರಿದಂತೆ ಸಿಬ್ಬಂದಿಯನ್ನು ಸಹ ಭದ್ರತೆಯ ದೃಷ್ಟಿಯಿಂದ ಕರೆದುಕೊಂಡು ಹೋಗಿದ್ದರಂತೆ.
ಇನ್ನು ತಾಳಿಕೋಟಿ ತಾಲೂಕಿನಲ್ಲಿಯೂ ದಾಳಿ ಮಾಡಿದ್ದು, ಪರಿಶೀಲನೆ ನಡೆಸಿ ಹೋಗಿದ್ದಾರಂತೆ. ಯಾವ ಕಾರಣಕ್ಕೆ ಈ ಒಂದು ದಾಳಿ ನಡೆದಿದೆ? ಯಾರ ಮೇಲೆ ದಾಳಿ ಮಾಡಲಾಗಿದೆ? ಘಟನೆಯ ಹಿನ್ನಲೆ ಏನು ಅನ್ನೋದು ತಿಳಿದು ಬರಬೇಕಿದೆ.



