LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿಜಯಪುರ: ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಜಿಲ್ಲಾ ತಳವಾರ(Talawar) ಸಮಾಜದ  ಪ್ರತಿಭಾ ಪುರಸ್ಕಾರ ಸಮಿತಿ ಹಾಗೂ ಜ್ಞಾನಗಂಗಾ ವಿವಿಧೋದ್ದೇಶ ಸಹಕಾರಿ ವಿಜಯಪುರ ಇವರ ಸಹಯೋಗದಲ್ಲಿ ಜು.27ರಂದು ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ 6ನೇ ವರ್ಷದ ಪ್ರತಿಭಾ ಪುರಸ್ಕಾರ ಹಾಗೂ ಸೇವಾ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ(M.B.Patil) ಅವರು ಉದ್ಘಾಟಿಸಲಿದಾರೆ. ಪ್ರತಿಭಾ ಪುರಸ್ಕಾರ ಸಮಿತಿ ಗೌರವ ಅಧ್ಯಕ್ಷರೂ ಆದ ಜ್ಞಾನಗಂಗಾ ವಿವಿಧೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷ ಡಾ.ಅಶೋಕ ಸಾಸನೂರ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ(BRP), ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ನಿವೃತ್ತ ಉಪನಿರ್ದೇಶಕ ಎಸ್.ವಾಯ್.ಹಳಿಂಗಳಿ, ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ರಾಜಶೇಖರ ಕೊಲ್ಹಾರ, ನಿವೃತ್ತ ಪೊಲೀಸ್ ಉಪ ಅಧೀಕ್ಷಕ ಎಸ್.ಬಿ.ಕೋಲಕಾರ, ಜ್ಞಾನಗಂಗಾ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕ ಮಹಾದೇವಪ್ಪ ಲಗಮಣ್ಣಾ ಸೊನ್ನ, ನಿವೃತ್ತ ಕೃಷಿ ಅಧಿಕಾರಿ ರಾಮಚಂದ್ರ ಕಾಸಣ್ಣ ಅಂಬಿಗೇರ, ಬಳಗಾನೂರ ಕುವೆಂಪು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಸವರಾಜ ನಾಯ್ಕೋಡಿ, ಖ್ಯಾತ ಉದ್ಯಮಿ ತುಕಾರಾ ರಾಮು ಕೋಳಿ, ನಿವೃತ್ತ ಗುರುಮಾತೆ ಶಾಂತಾಬಾಯಿ ಓತಿಹಾಳ, ಖ್ಯಾತ ಕೊಳಲು ವಾದಕ ಬಾಬುಜೀ ನಾಯ್ಕೋಡಿ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಕಾಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಚ್.ಜಿ.ತೊನಶ್ಯಾಳ, ಕೃಷಿ ಕ್ಷೇತ್ರದಲ್ಲಿ ಕುಮಟಗಿಯ ಮಹಾಂತಪ್ಪ ಸಂಗಪ್ಪ ವಾಲಿಕಾರ ಹಾಗೂ ಶಿಕ್ಷಣ ಕ್ಷೇತ್ರದ ವಿಶೇಷ ಸಾಧಕರಾಗಿ ಗುರುಮಾತೆಯರಾದ ಲಲಿತಾಬಾಯಿ ಪರಸಪ್ಪ ಅಂಬಿಗೇರ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಲಾಗಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST