LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

371(ಜೆ) ಧರಣಿ ಸತ್ಯಾಗ್ರಹಕ್ಕೆ ವಿವಿಧ ಸಂಘಗಳ ಬೆಂಬಲ

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ನಗರದ ಬಸವೇಶ್ವರ ಸರ್ಕಲ್ ಹತ್ತಿರ, ಗೋಕಾಕ ಚಳವಳಿಯ ರೂವಾರಿ ರೇ.ಚೆ. ರೇವಡಿಗಾರ ಪ್ರತಿಷ್ಠಾನ ಹಾಗೂ 371(ಜೆ) ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಧರಣಿ ಸತ್ಯಾಗ್ರಹ ೮ ದಿನಕ್ಕೆ ಕಾಲಿಟ್ಟಿದೆ. ಕರ್ನಾಟಕ ಸರಕಾರಿ ಹಾಗೂ ಅರೆ ಸರಕಾರಿ ನಿವೃತ್ತ ನೌಕರರ ಸಂಘದ ಸದಸ್ಯರು ಮತ್ತು ಶ್ರೀ ನೀಲಗಂಗಾದೇವಿ ಚೌಕ ಯುವಕ ಮಂಡಳಿ ಯುವಕರು, ಹಾಗೂ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯರು ಬೆಂಬಲ ಸೂಚಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ವ್ಹಿ.ಬಿ.ಕುರಡಿ, ಉಪಾಧ್ಯಕ್ಷ ಎಸ್.ಎಲ್.ಪಾಟೀಲ, ನಿವೃತ್ತ ಶಿಕ್ಷಕ ಎಸ್.ಬಿ.ಮುರಗಾನೂರ, ಬಿಜೆಪಿ ಮಹಿಳಾ ಘಟಕದ ಅದ್ಯಕ್ಷೆ ನೀಲಮ್ಮ ಯಡ್ರಾಮಿ ಮಾತನಾಡಿ,  ಹಲವಾರು ವರ್ಷಗಳಿಂದ ಹೈದ್ರಾಬಾದ ಕರ್ನಾಟಕ ಜನತೆ ನಡೆಸಿದ ಹೋರಾಟದ ಪ್ರತಿಫಲವಾಗಿ 2012-13 ರಲ್ಲಿ ಕಲ್ಯಾಣ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗಾಗಿ ಸಂವಿಧಾನದಲ್ಲಿ 371(ಜೆ) ಕಲಂ ಅನ್ನು ಜಾರಿಗೆ ತರಲಾಗಿದೆ. ಆದರೆ ಡಾ. ಡಿ.ಎಂ.ನಂಜುಂಡಪ್ಪ ವರದಿಯಲ್ಲಿ ಅಖಂಡ ಸಿಂದಗಿ, ಇಂಡಿ, ಬಾಗೇವಾಡಿ, ಮುದ್ದೆಬಿಹಾಳ ತಾಲೂಕುಗಳು ನಮೂದಾಗಿದ್ದರು ಕೂಡಾ ಆ ವರದಿಯನ್ನು ಪರಿಗಣಿಸದೇ ಇರುವುದನ್ನು ಅಂದಿನ ರಾಜಕಾರಣಿಗಳ ಇಚ್ಚಾಸಕ್ತಿ ಕೊರತೆಯಿಂದ  ವಿಜಯಪುರ ಜಿಲ್ಲೆಯನ್ನು ಕಡೆಗಣಿಸಿದ್ದು ದುರಂತ. ಈ ಭಾಗದ ಅನೇಕರು ರಜಾಕರ ಹಾಗೂ ಹಾವಳಿಯಿಂದ ನಡೆದ ದಂಗೆಯಲ್ಲಿ ತಮ್ಮ ಪ್ರಾಣವನ್ನೆ ತ್ಯಾಗ ಮಾಡಿದ್ದಾರೆ.  ಅದರಿಂದ ಹೆಚ್ಚು ಅನ್ಯಾಯಕ್ಕೊಳಗಾಗಿದೆ ಆ ಕಾರಣಕ್ಕೆ ಇಲ್ಲಿನ ಜನರಿಗೆ ಶಿಕ್ಷಣ, ಉದ್ಯೋಗದಲ್ಲಿ ಸಿಗಬೇಕಾದ ಮೀಸಲಾತಿ  ದೊರಕುವುದು ಅತ್ಯವಶ್ಯಕವಾಗಿದೆ ವಿಜಯಪುರ ಜಿಲ್ಲೆಯ ಜನರ ಆಶೋತ್ತರಗಳು ಈಡೇರಬೇಕಾದರೆ 371(ಜೆ) ಕಲಂಗೆ ಅನ್ವಯ ಮಾಡಬೇಕ. ಎಂದು ಆಗ್ರಹಿಸಿದರು.

ಶ್ರೀ ನೀಲಗಂಗಾದೇವಿ ಯುವಕ ಮಂಡಳಿ ಸದಸ್ಯ ಮುತ್ತು ಪಟ್ಟಣಶೆಟ್ಟಿ ಮಾತನಾಡಿ, ಈ ಭಾಗದ ಅಭಿವೃದ್ಧಿಗಾಗಿ ಸಂವಿಧಾನದಲ್ಲಿ ಕಲ್ಪಿಸಿರುವ 371(ಜೆ) ಕಲಂ ಸಮರ್ಪಕವಾಗಿ ಅನುಷ್ಠಾನವಾಗಬೇಕು ಹಾಗೂ ಯುವಕರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ನ್ಯಾಯಯುತ ಮೀಸಲಾತಿ ಸಿಗುವವರೆಗೆ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ ಎಂದರು. ಗೋಕಾಕ ಚಳವಳಿಯ ರೂವಾರಿ ಶ್ರೀ ರೇ.ಚ.ರೇವಡಿಗಾರ ಪ್ರತಿಷ್ಠಾನ ಹಾಗೂ 371(ಜೆ) ಹೋರಾಟ ಸಮಿತಿಯ ಪ್ರಮುಖರಾದ ರಂಗನಾಥ ತೋರ್ಫೆ, ಗುರುಸಿದ್ದ ಪಟ್ಟಣಶೆಟ್ಟಿ, ಮಾತನಾಡಿದರು.

ಈ ಸಂದರ್ಭದಲ್ಲಿ ಎಂ.ಎಂ.ಹಂಗರಗಿ, ರಾಜು ಬೈರಿ, ಸದಾನಂದ ಕುಂಬಾರ, ಚನ್ನಪ್ಪ ಗೋಣಿ, ಎಸ್.ಎನ್.ಬಿರಾದಾರ, ಜಿ.ಎಸ್.ಶಹಾಪೂರ, ಎಸ್.ಡಿ.ಜೋಗೂರ, ಪಂಡಿತ ಯಂಪೂರೆ, ಗುರುರಾಜ ಪಡಶೆಟ್ಟಿ, ಎ.ಎಸ್.ಬಮ್ಮಣ್ಣಿ, ಕೆ.ಎಸ್.ಕಡಣೀ, ಎ.ಎಸ್.ರುಕುಂಪುರ, ಬಿ.ಎಸ್.ಡಿಗ್ಗಿ, ಬಿ.ಎಸ್.ಗೌಳಿ, ಡಿ.ಕೆ.ರೊಟ್ಟಿ, ಎಸ್.ಎನ್.ಶಹಾಪುರ, ಆರ್.ಎನ್.ಹೆಬ್ಬಾಳ, ಸಂಗಣ್ಣ ಬ್ಯಾಕೋಡ, ರಾಘು ಯರನಾಳ, ಪ್ರಶಾಂತ ಕೆಂಬಾವಿ ಸೇರಿದಂತೆ ಅನೇಕರಿದ್ದರು.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST