ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಮುಜರಾಯಿ ಇಲಾಖೆಯ ದೇವಸ್ಥಾನಗಳ ಹುಂಡಿಗಳ ಕಣ್ಗಾವಲಿಗಾಗಿ ಸಿಸಿಟಿವಿ ಜೊತೆಗೆ ಕಮಾಂಡ್ ಸೆಂಟರ್ ತೆಗೆಯಲಾಗುವುದು. ಕೇಂದ್ರ ಕಚೇರಿಯಿಂದಲೇ ನಿಗಾವಹಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಹೇಳಿದ್ದಾರೆ. ಈ ಮೂಲಕ ಹುಂಡಿ ಕಳ್ಳತನ, ಲೆಕ್ಕಪತ್ರ ನಿರ್ವಹಣೆಯಲ್ಲಿ ಆಗುವ ದುರುಪಯೋಗ ತಡೆಯಲಾಗುವುದು ಅಂತಾ ಹೇಳಿದ್ದಾರೆ.
ರಾಜ್ಯದ ಮುಜರಾಯಿ ಇಲಾಖೆಯ 39 ಸಾವಿರ ದೇವಸ್ಥಾನಗಳಿವೆ. ಎ ವರ್ಗದ ದೇವಸ್ಥಾನಗಳಿಗೆ ಹೆಚ್ಚಿನ ಆದಾಯ ಬರುತ್ತದೆ. 2,521 ಕೋಟಿ ನಿಶ್ಚಿತ ಠೇವಣಿಯಿದೆ. ಆ ಹಣವನ್ನು ದೇವಸ್ಥಾನಗಳ ಅಭಿವೃದ್ಧಿಗೆ ಮಾತ್ರ ಖರ್ಚು ಮಾಡಬೇಕು. ಶೇಕಡ 10ರಷ್ಟು ಹಣವನ್ನು ಸಿ ವರ್ಗದ ದೇವಸ್ಥಾನಗಳ ಅಭಿವೃದ್ಧಿಗೆ ಬಳಸಲಾಗುವುದು.
ತಿರುಪತಿ, ವಾರಣಾಸಿ, ಶ್ರೀಶೈಲ, ತುಳಜಾಪುರದಲ್ಲಿ ಮುಜರಾಯಿ ಇಲಾಖೆಗೆ ಸಂಬಂಧಿಸಿದ ಆಸ್ತಿಗಳಿವೆ. ಅವುಗಳನ್ನು ರಕ್ಷಣೆ ಮಾಡಬೇಕು. ಅಲ್ಲಿ ವಸತಿ ಗೃಹ, ಯಾತ್ರಿಗಳಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಅಂತಾ ತಿಳಿಸಿದ್ದಾರೆ.



