ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಪಕ್ಷದ ಶಿಸ್ತು ಹಾಗೂ ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರ ವಿರುದ್ಧ ಅವಹೇಳನಕಾರಿಯಾಗಿ ಆರೋಪ ಮಾಡಿದ ಆರೋಪದಲ್ಲಿ, ಬಿಜೆಪಿ ರಾಜ್ಯ ಘಟದಕ ವಕ್ತಾರ ಎಂ.ಜಿ ಮಹೇಶ್ ಅವರನ್ನು ಉಚ್ಛಾಟನೆ ಮಾಡಲಾಗಿದೆ. ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಿ ಎಂದು ರಾಜ್ಯ ಶಿಸ್ತು ಸಮಿತಿಯ ಅಧ್ಯಕ್ಷ ಲಿಂಗರಾಜು ಪಾಟೀಲ ತಿಳಿಸಿದ್ದಾರೆ.
ಜೂನ್ 19ರಂದು ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರ ವಿರುದ್ಧ ಆಧಾರರಹಿತ ಹಾಗೂ ಕೀಳಮಟ್ಟದ ಆರೋಪ ಮಾಡಿ ಶಿಸ್ತು ಉಲ್ಲಂಘಿಸಿದ್ದರು. ಹೀಗಾಗಿ ನೋಟಿಸ್ ನೀಡಲಾಗಿತ್ತು. ಆದರೆ, ಅವರು ನೀಡಿದ ಸ್ಪಷ್ಟೀಕರಣ ತೃಪ್ತಿಕರವಲ್ಲದ ಕಾರಣ ಉಚ್ಛಾಟನೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.



