ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಮುಖ್ಯಮಂತ್ರಿಗಳ ನೂರು ದಿನದ ಕಾರ್ಯ, ನೇಮಕಾತಿ ಹಾಗೂ ಪ್ರಮುಖ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯನ್ನು ಸೋಮವಾರ ನಡೆಸಲಾಯಿತು. ಕೃಷಿ ಯಾಂತ್ರೀಕರಣಕ್ಕೆ ಉತ್ತೇಜನ ನೀಡುವ ಸಂಬಂಧ ಮುಖ್ಯಮಂತ್ರಿ ನೇಗಿಲ ಯೋಗಿ ಆಪ್ ಸಿದ್ಧಪಡಿಸಲಾಗಿದೆ. ನವೆಂಬರ್ 1ರಿಂದ ಇದು ಕಾರ್ಯ ನಡೆಸಲಿದೆ ಎಂದು ಈ ವೇಳೆ ತಿಳಿಸಲಾಯಿತು.
ಪ್ರಗತಿ ಪರಿಶೀಲನೆ ಸಭೆ ನಡೆಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೆ ಫಾರ್ಮ್ ಆಪ್ ಸೇವೆಗೆ ಸಿದ್ಧವಾಗಿದೆ. ಮುಖ್ಯಮಂತ್ರಿ ರೈತ ಚೈತನ್ಯ ಅಗ್ರಿಟೆಕ್ ಮಿಷನ್ ಯೋಜನೆ ಹಿನ್ನಲೆ 25 ಲಕ್ಷ ಎಸ್ಎಂಎಸ್ ಕಳಿಸಲಾಗಿದೆ. ಅಲ್ಲದೆ ವಿಡಿಯೋ ಸಂದೇಶ ಸಹ ಕಳಿಸಲಾಗಿದೆ. ಕೃಷಿ ಹಾಗೂ ತೋಟಗಾರಿಕೆ ರಫ್ತು ಪ್ರೋತ್ಸಾಹ ನೀಡುವ ಸಂಬಂಧ 2027ರ ಅಂತ್ಯದೊಳಗೆ 2 ಸಾವಿರ ರೈತರಿಗೆ ರಫ್ತುದಾರರಾಗಲು ತರಬೇತಿ, ಮಾರ್ಗದರ್ಶನ ನೀಡಿ ಸಿದ್ಧಗೊಳಿಸುವ ಗುರಿ ಹೊಂದಲಾಗಿದೆ.
ಜಾನುವಾರು ಹಾಗೂ ಕುಕ್ಕಟ ಉದ್ಯಮಕ್ಕೆ ಉತ್ತೇಜನ ನೀಡುವುದು. ಮೊಟ್ಟೆ ಉತ್ಪಾದನೆಗೆ 1058 ಕೋಟಿಯಿಂದ 1137 ಕೋಟಿ ರೂಪಾಯಿ ಹೆಚ್ಚಿಸಲಾಗಿದೆ. ರೈತರ ವಿದ್ಯುತ್ ಸಮಸ್ಯಗೆ ಪರಿಹಾರ ಒದಗಿಸಲು ಶೇಕಡ 50ರಷ್ಟು ಸಬ್ಸಿಡಿ ನೀಡುವ ಕುರಿತು ಮಂಗಳವಾರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗುವುದು ತಿಳಿಸಲಾಗಿದೆ.


