LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಫಿಫಾ ವಿಶ್ವಕಪ್: ಯುಎಸ್ ವೀಸಾ ನೀತಿಯಿಂದ ಆಟಗಾರರು, ರೆಫ್ರಿ, ಅಭಿಮಾನಿಗಳಿಗೆ ಸಮಸ್ಯೆ

ಪ್ರಜಾಸ್ತ್ರ ಸುದ್ದಿ

ವಾಷಿಂಗ್ಟನ್(washington dc): ಅಮೆರಿಕಾದಲ್ಲಿ ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿ ನಡೆಯುತ್ತಿದೆ. ಆದರೆ, ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಸಮಸ್ಯೆ ತಲೆ ದೋರಿದೆ. ಅಮೆರಿಕ ವೀಸಾ ನೀತಿಯಿಂದ ಆಟಗಾರರಿಗೆ, ರೆಫ್ರಿಗಳಿಗೆ, ಅಭಿಮಾನಿಗಳಿಗೂ ಸಂಕಷ್ಟ ತಂದಿದೆ. ಈ ಬಗ್ಗೆ ಅಮೆರಿಕದ 21 ಫುಟ್ಬಾಲ್ ಸಂಘಟನೆಗಳು ಎಚ್ಚರಿಕೆ ನೀಡಿವೆ.

ವಿದೇಶಿ ಪ್ರವಾಸಿಗರಿಗೆ, ಅಲ್ಪಸಂಖ್ಯಾತರಿಗೆ, ಲೈಂಗಿಕ ಅಲ್ಪಸಂಖ್ಯಾತರು ತೊಂದರೆಗೆ ಸಿಲಕುವ ಸಂಭವ ಇದೆ ಎನ್ನುವ ಎಚ್ಚರಿಕೆ ನೀಡಲಾಗಿದೆ. ಈಗಾಗ್ಲೇ ಸೋಮಾಲಿಯಾದ ಖ್ಯಾತ ರೆಫ್ರಿ ಒಮರ್ ಅರ್ತಾನ್ ಗೆ ಉಗ್ರ ಸಂಘಟನೆಗಳ ನಂಟಿದೆ ಎಂದು ಹೇಳಿ ಪ್ರವೇಶ ನಿರಾಕರಿಸಲಾಗಿದೆ. ಇರಾಕ್ ತಂಡವನ್ನು ವಿಮಾನ ನಿಲ್ದಾಣದಲ್ಲಿ ಗಂಟೆಗಟ್ಟಲೆ ತಪಾಸಣೆ ನಡೆಸಲಾಗಿದೆ. ಇವರ ಜೊತೆಗಿದ್ದ ಫೋಟೋಗ್ರಾಫರ್ ಗೆ ಪ್ರವೇಶ ನಿರಾಕರಿಸಲಾಗಿದೆ. ಇರಾನ್ ತಂಡದ ಹೋಟಲ್ ಸ್ಥಳಾಂತರಿಸಲಾಗಿದೆ.

ಟ್ರಂಪ್ ಸರ್ಕಾರದ ವೀಸಾ ನೀತಿಯಿಂದ 39 ದೇಶಗಳ ಪ್ರವಾಸಿಗರ ಮೇಲೆ ಸಂಪೂರ್ಣ ಹೊಡೆತ ಬೀಳುತ್ತಿದೆ. ಈಗಾಗ್ಲೇ ಹೋಟೆಲ್, ವಿಮಾನ ಬುಕ್ಕಿಂಗ್ ಮಾಡಿದ ಫುಟ್ಬಾಲ್ ಅಭಿಮಾನಿಗಳು ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವಂತಾಗಿದೆ. ನ್ಯೂಜರ್ಸಿಯ ಮೆಟ್ ಲೈಪ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಇದು ಸೇರಿದಂತೆ 11 ನಗರಗಳಲ್ಲಿ ಪಂದ್ಯ ನಡೆಯಲಿದ್ದು, 2025 ಜನವರಿಂದ 2026 ಮಾರ್ಚ್ ಅವಧಿಯಲ್ಲಿ 1 ಲಕ್ಷದ 67 ಸಾವಿರ ಜನರನ್ನು ಬಂಧಿಸಲಾಗಿದೆ ಎಂದು ಮಾನವ ಹಕ್ಕುಗಳ ಕಣ್ಗಾವಲು ಸಂಸ್ಥೆ ವರದಿ ಹೇಳುತ್ತಿದೆ.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST