LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಿಂದಗಿ, ಆಲಮೇಲ ಬರಪೀಡಿತ ತಾಲೂಕು ಎಂದು ಘೋಷಿಸಲು ಸಿಎಂಗೆ ಪತ್ರ

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಮುಂಗಾರು ಮಳೆ ಅಭಾವದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಸಿಂದಗಿ ಹಾಗೂ ಆಲಮೇಲ ತಾಲೂಕುಗಳನ್ನು ತೀವ್ರ ಬರಪೀಡಿತ ತಾಲೂಕುಗಳೆಂದು ಘೋಷಿಸಲು ಶಾಸಕ ಅಶೋಕ ಮನಗೂಳಿ ಅವರು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಹಾಗೂ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

ಅವಳಿ ತಾಲೂಕಿನ ಬಹುತೇಕ ಕಡೆ ವಾಡಿಕೆಗಿಂತ ಶೇಕಡ 25ರಷ್ಟು ಮಳೆ ಕೊರತೆಯಿದೆ. ಅತಿಯಾದ ಗಾಳಿ, ಶೇಕಡ 36 ರಿಂದ 44ರವರೆಗಿನ ಉಷ್ಣಾಂಶದಿಂದ ಅಲ್ಪಸ್ವಲ್ಪ ಬಿತ್ತನೆಯಾದ ಬೆಳೆಗಳು ಸಹ ರೈತರಿಗೆ ಕೈಕೊಡುವ ಲಕ್ಷಣಗಳಿವೆ. ಜೂನ್ 1 ರಿಂದ ಆಗಸ್ಟ್ 12ರ ತನಕ ವಾಡಿಕೆಯಂತೆ 260.3 ಮೀಲಿ ಮೀಟರ್ ಮಳೆಯಾಗಬೇಕಿತ್ತು. 200.3 ಮೀ.ಮೀ ಮಳೆಯಾಗಿದೆ. ಶೇಕಡ 25ರಷ್ಟು ಕೊರೆತಾಗಿದೆ.

73,293 ಹೆಕ್ಟರ್ ಬಿತ್ತನೆ ಪ್ರದೇಶದಲ್ಲಿ 61,566 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಅಂದರೆ ಶೇಕಡ 84ರಷ್ಟು ಬಿತ್ತಲಾಗಿದೆ. ಇದರಲ್ಲಿ 23,430 ಹಕ್ಟರ್ ಪ್ರದೇಶದಲ್ಲಿ ತೊಗರಿ, 26,090 ಹಕ್ಟರ್ ಪ್ರದೇಶದಲ್ಲಿ ಹತ್ತಿ, 10,533 ಹಕ್ಟರ್ ಪ್ರದೇಶದಲ್ಲಿ ಕಬ್ಬು ಹಾಗೂ 1,500 ಹಕ್ಟರ್ ಪ್ರದೇಶದಲ್ಲಿ ಇತರೆ ಬೆಳೆಗಳನ್ನು ಬೆಳೆಯಲಾಗಿದೆ. ಒಟ್ಟು ಬಿತ್ತನೆಯ ಶೇಕಡ 84ರಷ್ಟರಲ್ಲಿ ಶೇಕಡ 60ಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಹಾನಿಯಾಗಿದೆ. ಹೀಗಾಗಿ ಸಿಂದಗಿ, ಆಲಮೇಲ ಅವಳಿ ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಘೋಷಿಸಬೇಕು ಎಂದು ಶಾಸಕ ಅಶೋಕ ಮನಗೂಳಿ ಅವರು ಪತ್ರ ಬರೆದಿದ್ದಾರೆ.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST