ಪ್ರಜಾಸ್ತ್ರ ಸುದ್ದಿ
ಕಠ್ಮಂಡು(Katmandu): ನೇಪಾಳದ ರುಸುವಾ ಜಿಲ್ಲೆಯಲ್ಲಿ ಬುಧವಾರ ಸಂಜೆ ಭೀಕರ ಪ್ರವಾಹ ಸಂಭವಿಸಿದೆ. ಹಲವಾರು ನಗರಗಳು ಕೊಚ್ಚಿಕೊಂಡು ಹೋಗಿವೆ. ಇದುವರೆಗೂ 160ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಸಾವಿರಾರು ಜನರು ನಾಪತ್ತೆಯಾಗಿದ್ದಾರೆ. ಇದರಲ್ಲಿ 300 ಭಾರತೀಯರು ಇದ್ದಾರೆ ಎಂದು ವಿದೇಶಾಂಗ ಸಚಿವ ಶಿಶಿರ್ ಖನಾಲ್ ತಿಳಿಸಿದ್ದಾರೆ.
ನಾಪತ್ತೆಯಾದ ಭಾರತೀಯರಲ್ಲಿ ಬಹುತೇಕರು ಮಾನಸ ಸರೋವರ ನೋಡಲು ಬಂದ ಪ್ರವಾಸಿಗರಾಗಿದ್ದಾರೆ ಎಂದು ತಿಳಿಸಿದ್ದಾರೆ. ಒಟ್ಟು 500 ಪ್ರವಾಸಿಗರು ಕಾಣೆಯಾಗಿದ್ದು, 300 ಪ್ರವಾಸಿಗರು ಭಾರತೀಯರು ಎಂದು ನೇಪಾಳ ವಿದೇಶಾಂಗ ಸಚಿವರು ಹೇಳಿದ್ದಾರೆ.



