ಪ್ರಜಾಸ್ತ್ರ ಸುದ್ದಿ
ಪ್ಯಾರಿಸ್(Paris): ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಜಿ7 ಸಭೆಯಲ್ಲಿ ವಿಶ್ವ ನಾಯಕರು ಮುಖಾಮುಖಿಯಾಗಿದ್ದಾರೆ. ಅದರಲ್ಲೂ ಭಾರತದ ಪ್ರಧಾನಿ ಮೋದಿ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಭೇಟಿ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಈ ಬಗ್ಗೆ ಮೋದಿಯೊಂದಿಗೆ ಮಾತನಾಡುವಾಗ ಸಾಮಾಜಿಕ ಜಾಲತಾಣದಲ್ಲಿ ನಾವೀಗ ಜನಪ್ರಿಯ ಜೋಡಿ ಎಂದು ಮೆಲೋನಿ ಹೇಳಿದ್ದಾರೆ.
ನಿಮ್ಮನ್ನು ಮತ್ತೆ ಭೇಟಿಯಾಗಿರುವುದು ಸಂತೋಷವಾಯಿತು ಎಂದು ಮೆಲೋನಿ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋ ಬಗ್ಗೆ ಮೋದಿ ಹೇಳಿದಾಗ, ಹೌದು ಇನ್ಸ್ಟಾಗ್ರಾಮ್ ನಲ್ಲಿ ನಾವೀಗ ಜನಪ್ರಿಯ ಜೋಡಿ ಅಂತಾ ಹೇಳಿ ಮೆಲೋನಿ ನಕ್ಕಿದ್ದಾರೆ. ಕಳೆದು ತಿಂಗಳು ಪ್ರಧಾನಿ ಮೋದಿ ಇಟಲಿಗೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ಪ್ರಧಾನಿ ಮೆಲೋನಿಗೆ ಮೆಲೋಡಿ ಚಾಕಲೇಟ್ ನೀಡಿದ್ದರು. ಇದು ವಿಶ್ವದಾದ್ಯಂತ ಭಾರೀ ಸುದ್ದಿ ಆಯಿತು.



