LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನೇಪಾಳದಲ್ಲಿ ಪ್ರವಾಹ, ಭೂಕುಸಿತ: 49 ಜನರ ಸಾವು

ಪ್ರಜಾಸ್ತ್ರ ಸುದ್ದಿ

ಕಠ್ಮಂಡು(Kathmandu): ನೇಪಾಳದಲ್ಲಿ ಭಾರೀ ಪ್ರವಾಹ, ಭೂಕುಸಿತದಿಂದಾಗಿ 49 ಜನರು ಪ್ರಾಣ ಕಳೆದುಕೊಂಡಿದ್ದಾರೆ. 9 ಜನರು ಕಾಣೆಯಾಗಿದ್ದಾರೆ. ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಪ್ರವಾಹ, ಭೂಕುಸಿತವಾಗಿದೆ. ರಸ್ತೆಗಳು ಬಂದ್ ಆಗಿವೆ. ಸೇತುವೆಗಳು ಕೊಚ್ಚಿಕೊಂಡು ಹೋಗಿವೆ.

ಕಠ್ಮಂಡು, ಇಆಲಾಮ್ ಜಿಲ್ಲೆಯ ಕೊಶಿ ಸೇರಿದಂತೆ ಅನೇಕ ಕಡೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಪಂಚಥರ್, ಉದಯಪುರ, ರಸುವಾ ಜಿಲ್ಲೆಗಳಲ್ಲಿ ನದಿಗಳು ತುಂಬಿ ಹರಿಯುತ್ತಿವೆ. ನೇಪಾಳ ಸೇನೆ, ಪೊಲೀಸ್ ಇಲಾಖೆ, ಎಪಿಎಫ್ ರಕ್ಷಣಾ ಪಡೆ ಕಾರ್ಯಾಚರಣೆಯಲ್ಲಿ ಭಾಗವಹಿಸಿವೆ. ನಿರಾಶ್ರಿತರಿಗೆ ಪರಿಹಾರ ನೀಡುವ ಕಾರ್ಯ ನಡೆದಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST