ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಗೆ ಸುಪ್ರೀಂ ಕೋರ್ಟ್ ಒಂದು ವರ್ಷ ಜಾಮೀನು ನಿರಾಕರಿಸಿದೆ. ಜೊತೆಗೆ ಅಷ್ಟರೊಳಗೆ ಸಾಕ್ಷಿಗಳ ವಿಚಾರಣೆಯುವ ಮುಗಿಸುವಂತೆ ತನಿಖಾ ತಂಡಕ್ಕೆ ಸೂಚಿಸಿದೆ. ಈಗ ನಟ ದರ್ಶನ್ ಜಾಮೀನು ನಿರಾಕರಣೆ ಆದೇಶ ಪರಿಷ್ಕರಣೆಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಒಂದು ಜಾಮೀನು ನಿರಾಕರಣೆಯಿಂದ ವಿಚಾರಣೆ ಇನ್ನಷ್ಟು ವಿಳಂಬವಾಗಬಹುದು. ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಶೀಘ್ರ ವಿಚಾರಣೆಯ ಹಕ್ಕಿನ ಕಾಯ್ದೆ 21ರೊಳಗೆ ರಕ್ಷಿತವಾಗಿದ್ದು, ದೀರ್ಘಾವಧಿಯ ಬಂಧನವನ್ನು ಕಾಲಕಾಲಕ್ಕೆ ಕೋರ್ಟ್ ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದಾರೆ. ಅಲ್ಲದೆ ತಾಯಿಯು ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೆ ತಮ್ಮ ವೃತ್ತಿ ಜೀವನ, ಕುಟುಂಬದ ಹಾನಿಯ ಕುರಿತು ಮನವಿಯಲ್ಲಿ ತಿಳಿಸಿದ್ದಾರೆ.



