LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಭೈರತಿ ರಣಗಲ್ ಖದರ್.. ಅಭಿಮಾನಿಗಳ ಹಬ್ಬ

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಸ್ಯಾಂಡಲ್ ವುಡ್ ಸಂಚ್ಯುರಿ ಸ್ಟಾರ್ ಶಿವರಾಜಕುಮಾರ್ ನಟನೆಯ ಭೈರತಿ ರಣಗಲ್ ಸಿನಿಮಾ ಇಂದು ರಿಲೀಸ್ ಆಗಿದೆ. ಬೆಳಗಿನ ಜಾವದಿಂದಲೇ ಶೋಗಳು ಶುರುವಾಗಿದ್ದು, ಅಭಿಮಾನಿಗಳು ಹಬ್ಬ ಮಾಡುತ್ತಿದ್ದಾರೆ. ಶಿವಣ್ಣನ ಆರ್ಭಟಕ್ಕೆ ಥಿಯೇಟರ್ ನಲ್ಲಿ ಸಿನಿ ಪ್ರಿಯರು ಸಂಭ್ರಮಿಸುತ್ತಿದ್ದಾರೆ. ಮಫ್ತಿ ಚಿತ್ರದ ಪ್ರಿಕ್ವೇಲ್ ಇದಾಗಿದ್ದು, ಇಲ್ಲಿ ಭೈರತಿ ರಣಗಲ್ ಖದರ್ ಜೋರಾಗಿದೆ. ನರ್ತನ್ ನಿರ್ದೇಶನದಲ್ಲಿ ಸಿನಿಮಾ ಪಕ್ಕಾ ಮಾಸ್ ಆಡಿಯನ್ಸ್ ಗೆ ಹೇಳಿ ಮಾಡಿಸಿದಂತಿದೆ.

ಮಫ್ತಿಯಲ್ಲಿ ಶಿವಣ್ಣನ ಖಡಕ್ ಲುಕ್ ಎಲ್ಲರನ್ನ ಶೇಕ್ ಮಾಡಿತ್ತು. ಇಡೀ ಚಿತ್ರದಲ್ಲಿ ಒಂದೇ ಫೈಟ್ ನಲ್ಲಿ ಕಾಣಿಸಿಕೊಂಡಿಲ್ಲ. ಆದರೆ, ಭೈರತಿ ರಣಗಲ್ ನಲ್ಲಿ ಮಚ್ಚು, ಲಾಂಗು, ಗನ್ ಹಿಡಿದು ಅಬ್ಬರಿಸಿದ್ದಾರೆ. ಫಸ್ಟ್ ಆಫ್ ಸಿನಿಮಾನೆ ಬೆಂಕಿ ಎನ್ನುತ್ತಿರುವ ಫ್ಯಾನ್ಸ್, ಇಡೀ ಸಿನಿಮಾ ನೆಕ್ಸ್ಟ್ ಲೆವ್ ನಲ್ಲಿದೆ ಎನ್ನುತ್ತಿದ್ದಾರೆ. ನಾನು ತಲೆ ಕೆಡಿಸಿಕೊಂಡಾಗಲೆಲ್ಲ ಎಷ್ಟೋ ಜನರ ತಲೆಗಳು ಉರುಳಿವೆ, ಇನ್ಮುಂದೆ ರೋಣಾಪುರದಲ್ಲಿರುವುದು ಸರ್ವೇ ಕಲ್ಲುಗಳಲ್ಲ, ರಣಗಲ್ ಸಾಮ್ರಾಜ್ಯದ ಮೈಲುಗಳು ಎನ್ನುವ ಮಾಸ್ ಡೈಲಾಗ್ ಗೆ ಶಿಳ್ಳೆ, ಚಪ್ಪಾಳೆ, ಕೂಗಾಟ ಎಲ್ಲೆಡೆ ಕೇಳಿ ಬರುತ್ತಿದೆ.

ರವಿ ಬಸ್ರೂರ್ ಮ್ಯೂಸಿಕ್ ಗೆ ಫ್ಯಾನ್ಸ್ ಬೋಲ್ಡ್ ಆಗಿದ್ದಾರೆ. ನಟಿಯರಾದ ರುಕ್ಮಿಣಿ ವಸಂತ್, ಛಾಯಾ ಸಿಂಗ್, ಹಿರಿಯ ನಟ ಅವಿನಾಶ್ ಸೇರಿದಂತೆ ಬಹುದೊಡ್ಡ ತಾರಾಬಳಗವಿದೆ. ಗೀತಾ ಫಿಕ್ಚರ್ಸ್ ಅಡಿಯಲ್ಲಿ ಗೀತಾ ಶಿವರಾಜಕುಮಾರ್ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ವೇದ ಸಿನಿಮಾ ಬಳಿಕ ಇವರ ನಿರ್ಮಾಣದ 2ನೇ ಸಿನಿಮಾ ಇದಾಗಿದೆ. ಶಿವಣ್ಣನ ಆರ್ಭಟ ನೋಡಲು ಥಿಯೇಟರ್ ಗೆ ಹೋಗಬೇಕು ಅಂತಿದ್ದಾರೆ ಫ್ಯಾನ್ಸ್.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST