LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

Couple Death: ಪತಿ-ಪತ್ನಿ ಸಾವು.. ಅನಾಥವಾದ ಮಗು

ಪ್ರಜಾಸ್ತ್ರ ಸುದ್ದಿ

ಮಂಡ್ಯ(Mandaya): ಪತ್ನಿ ಮನೆಯಲ್ಲಿ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದರೆ, ಪತಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್ ಪೇಟೆ(KR Pete) ತಾಲೂಕಿನ ಮಂದಗೆರೆ ಗ್ರಾಮದಲ್ಲಿ ನಡೆದಿದೆ. ಸ್ವಾತಿ(21) ಹಾಗೂ ಈಕೆಯ ಪತಿ ಮೋಹನ್(26) ಮೃತ ದುರ್ದೈವಿಗಳು. ಪತಿಯ ಮನೆಯವರು ತಲೆ ಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮೃತ ಸ್ವಾತಿಯ ಕುಟುಂಬಸ್ಥರು ಕೊಲೆ(Murder) ದೂರು ದಾಖಲಿಸಿದ್ದಾರೆ. ಘಟನೆಯಿಂದಾಗಿ ಒಂದೂವರೆ ವರ್ಷದ ಹೆಣ್ಣು ಮಗು ಅನಾಥವಾಗಿದೆ.

ಸ್ವಾತಿ ಮೃತದೇಹ ನೇಣು(Hanging) ಬೀಗದ ಸ್ಥಿತಿಯಲ್ಲಿ ಪತಿಯ ಮನೆಯಲ್ಲಿ ಕಳೆದ ರಾತ್ರಿ ಪತ್ತೆಯಾಗಿದೆ. ವಿಷಯ ತಿಳಿದು ಆಕೆಯ ಪೋಷಕರು, ಸಂಬಂಧಿಕರು ಗ್ರಾಮಕ್ಕೆ ಬಂದು ಗಲಾಟೆ ಮಾಡಿ ಮನೆಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಹುಡುಗನ ಮನೆಯವರು ತಲೆ ಮರೆಸಿಕೊಂಡಿದ್ದಾರೆ. ಹುಡುಗ ಸಹ ಪರಾರಿಯಾಗಿದ್ದ. ಬುಧವಾರ ಮುಂಜಾನೆ ಆತನ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಘಟನೆಯಿಂದ ಹೆದರಿ ಆತ್ಮಹತ್ಯೆ(Suicide) ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ. ಆತನ ಮನೆಯವರ ಪತ್ತೆ ಕಾರ್ಯ ನಡೆಯುತ್ತಿದೆ. 30 ವರ್ಷ ಸಹ ದಾಟದ ದಂಪತಿಯ ಸಾವು ಹಲವು ಅನುಮಾನಗಳನ್ನು ಮೂಡಿಸಿದೆ. ಏನೂ ಅರಿಯದ ಒಂದೂವರೆ ವರ್ಷದ ಹೆಣ್ಮಗು ತಬ್ಬಲಿಯಾಗಿದೆ. ಯಾವ ಕಾರಣಕ್ಕೆ ಈ ದುರಂತ ನಡೆಯಿತು ಅನ್ನೋದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST