ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ 2ನೇ ಆರೋಪಿಯಾಗಿರುವ ನಟ ದರ್ಶನ್ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಮುಂದಿನ ಒಂದು ವರ್ಷದಲ್ಲಿ ವಿಚಾರಣೆಯಲ್ಲಿ ಯಾವುದೇ ಪ್ರಗತಿ ಆಗದಿದ್ದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಬಹುದು ಎಂದಿದೆ. ಹೀಗಾಗಿ ಇನ್ನೊಂದು ವರ್ಷ ನಟ ದರ್ಶನಗೆ ಜೈಲೇ ಗತಿ ಆಗಿದೆ.
ಇನ್ನು ಬಾಕಿ ಇರುವ 60 ಸಾಕ್ಷಿಗಳನ್ನು ಮುಂದಿನ ಒಂದು ವರ್ಷದಲ್ಲಿ ವಿಚಾರಣೆ ನಡೆಸಬೇಕು. ಇನ್ನು ದರ್ಶನಗೆ ರಾಜಾತಿಥ್ಯ ನೀಡಬೇಡಿ ಎಂದರೆ ಜೈಲಿನಲ್ಲಿ ಯಾವುದೇ ಸೌಲಭ್ಯ ನೀಡಬೇಡಿ ಎಂದರ್ಥವಲ್ಲ. ಜೈಲಿನ ನಿಯಮದ ಅನುಸಾರಿ ವಿಚಾರಣಾಧೀನ ಕೈದಿಗಳಿಗೆ ನೀಡುವ ಎಲ್ಲ ಸೌಲಭ್ಯ ನೀಡಬೇಕು. ಅಲ್ಲದೆ ಆರೋಪಿಯನ್ನು ಒಂಟಿಯಾಗಿರಿಸುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿ ಜೆ.ಬಿ ಪಾರ್ದಿವಾಲಾ ನೇತೃತ್ವದ ಪೀಠ ಹೇಳಿದೆ.



