LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮನೆ ಕಳ್ಳತನಕ್ಕೆ ಬಂದು ಎಣ್ಣೆ ನಶೆಯಲ್ಲಿ ಮಲಗಿದ…

ಪ್ರಜಾಸ್ತ್ರ ಸುದ್ದಿ

ಗೌರಿಬಿದನೂರು(Gouribidanoru): ಮನೆ ಕಳ್ಳತನಕ್ಕೆ ಸ್ನೇಹಿತನ ಜೊತೆಗೆ ಬಂದವನು ಎಣ್ಣೆಯ ನಶೆಯಲ್ಲಿ ಮನೆಯಲ್ಲಿಯೇ ಮಲಗಿದ್ದಾನೆ. ಇದನ್ನು ನರೆಹೊರೆಯುವರು ಗಮನಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಕಳ್ಳನನ್ನು ವಶಕ್ಕೆ ಪಡೆದಿದ್ದಾರೆ. ದೇವರಾಜು(40) ಬಂಧಿತ ಆರೋಪಿಯಾಗಿದ್ದಾನೆ.

ನಗರದ ಹೊರವಲಯದ ಹಳೆ ಆರ್ ಟಿಒ ಕಚೇರಿ ಹತ್ತಿರ ಪ್ರೇಮನಾಥ್ ಎಂಬುವರ ಮನೆಯಿದೆ. ಇಲ್ಲಿಗೆ ಬಂಧಿತ ದೇವರಾಜು ಬಣ್ಣ ಬಳಿಯುವ ಕೆಲಸಕ್ಕೆ ಆಗಾಗ ಬರುತ್ತಿದ್ದ. ಪ್ರೇಮನಾಥ್ ಕೆಲಸದ ವಿಚಾರವಾಗಿ ಹೈದ್ರಾಬಾದ್ ಗೆ ಹೋಗಿದ್ದರು. ಇದನ್ನು ತಿಳಿದ ದೇವರಾಜು ಭಾನುವಾರ ಸ್ನೇಹಿತನ ಜೊತೆಗೆ ಬಂದಿದ್ದಾನೆ. ಮನೆಯ ಮೇಲ್ಛಾವಣಿ ಕತ್ತರಿಸಿ ಒಳ ನುಗ್ಗಿದ್ದಾರೆ. ಮನೆಯಲ್ಲಿದ್ದ 45 ಸಾವಿರ ರೂಪಾಯಿ, ಚಿನ್ನಾಭರಣ ತೆಗೆದುಕೊಂಡಿದ್ದಾರೆ. ಇವನ ಜೊತೆಗೆ ಬಂದಿದ್ದ ಸ್ನೇಹಿತ ಎಲ್ಲವನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ. ಹೆಚ್ಚು ಮದ್ಯ ಸೇವನೆ ಮಾಡಿದ್ದ ದೇವರಾಜು ಅಲ್ಲಿಯೇ ಮಲಗಿದ್ದಾನೆ. ಇದನ್ನು ನೋಡಿದ ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಗ್ರಾಮಾಂತರ ಠಾಣೆಯಲ್ಲಿ ಮನೆ ಮಾಲೀಕ ಪ್ರೇಮನಾಥ್ ದೂರು ಸಲ್ಲಿಸಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST