LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಾಯಚೂರು: ನಕಲಿ ಸಾಲ ವಸೂಲಿ ಟೀಂ ಬಂಧನ

ಪ್ರಜಾಸ್ತ್ರ ಸುದ್ದಿ

ರಾಯಚೂರು(Raichur): ರಾಜ್ಯದಲ್ಲಿ ಮೊದಲೇ ಜನವರು ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಕಿರುಕುಳಕ್ಕೆ ಬೇಸತ್ತಿದ್ದಾರೆ. ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿರುವ ಹೊತ್ತಿನಲ್ಲಿ ಕೆಲ ಕಿಡಿಗೇಡಿಗಳು ಇದನ್ನು ಸಹ ಬಂಡವಾಳ ಮಾಡಿಕೊಂಡು ಮೈಕ್ರೋ ಫೈನಾನ್ಸ್ ಸಾಲ ವಸೂಲಿ ಟೀಂ ಎಂದು ಹೇಳಿಕೊಂಡು ಜನರಿಗೆ ಮತ್ತಷ್ಟು ಮೋಸ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ.

ಮೊಬೈಲ್ ಆಪ್ ವೊಂದರ ಮೂಲಕ ಫೈನಾನ್ಸ್ ಬಾಕಿ ಇರುವವರನ್ನು ಗುರುತು ಮಾಡಿಕೊಳ್ಳುತ್ತಿತ್ತು. ನಂತರ ಅವರನ್ನು ಗುರಿಯಾಗಿಸಿಕೊಂಡು ರಸ್ತೆ ನಡುವೆ ಹಿಡಿಯುತ್ತಿದ್ದರು. ಬೈಕ್, ಕಾರು ನಿಲ್ಲಿಸಿ ಸಾಲ ಮರುಪಾವತಿಸುವಂತೆ ಬೆದರಿಕೆ ಹಾಕುತ್ತಿದ್ದರು. ರಾಯಚೂರು ಹೊರವಲಯದ ಬೈಪಾಸ್ ನಲ್ಲಿ ಕೆಲವರು ಸೈಯದ್ ಬಾಷಾ ಎಂಬುವರ ಬುಲೆರೋ ತಡೆದು, ಫೈನಾನ್ಸ್ ನಲ್ಲಿ ಹಣ ಕಟ್ಟಿದರೆ ಸಾಲಲ್ಲ. ನಮಗೂ ಹಣ ಕೊಡಬೇಕು ಎಂದು ಬೆದರಿಕೆ ಹಾಕಿದ್ದರು. ಅದರಿಂದ ಅನುಮಾನ ಬಂದು ಬಾಷಾ ಸಹೋದರ ಅಜೀಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಕುರಿತು ರಾಯಚೂರು ಗ್ರಾಮೀಣ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. ಶೇಖ್ ಅಯುಬ್, ಸೈಯದ್ ಶಹಬಾಜ್ ಅಹ್ಮದ್, ಅರೋನ್ ರಸೀದ್, ಫಯಾಜ್ ಎನ್ನುವ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಮೊದಲೇ ಸಾಲದಿಂದ ಜನರ ನರಳುತ್ತಿದ್ದು, ಇಂತಹ ಪರಿಸ್ಥಿತಿಯಲ್ಲೂ ಅವರಿಂದ ಹಣ ಸುಲಿಗೆ ಮಾಡಲು ಅಕ್ರಮ ದಾರಿ ಹಿಡಿದು ಬೆದರಿಕೆ ಹಾಕುತ್ತಿದ್ದರು. ಇದೀಗ ಪೊಲೀಸ್ ಅತಿಥಿಯಾಗಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST