ಪ್ರಜಾಸ್ತ್ರ ಸುದ್ದಿ
ನಟ ದರ್ಶನ್ ನಟನೆಯ ಕರಿಯ ರೀ ರಿಲೀಸ್ ಆಗುತ್ತದೆ ಎಂದು ನಿರ್ದೇಶಕ ಪ್ರೇಮ್ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಆಗಸ್ಟ್ 30ರಂದು ಕರಿಯಾ ಸಿನಿಮಾ ಮರು ಬಿಡುಗಡೆಯಾಗುತ್ತಿದೆ. ಇದು ನಿಮ್ಮಿಂದ ಸೆಲೆಬ್ರಿಟಿಸ್. ಶಾಂತಿ ತಾಳ್ಮೆ ಹಾಗೂ ಪ್ರೀತಿಯಿಂದ ಕರಿಯನನ್ನು ಹರಸಿ ಹಾರೈಸಿ ಯಾವುದೇ ಅತಿರೇಕಗಳನ್ನು ಮಾಡದೆ ಎನ್ನುವುದು ಸೇರಿದಂತೆ ದರ್ಶನ್ ಕಾನೂನು ವಿಚಾರವನ್ನು ಸಹ ಪ್ರಸ್ತಾಪಿಸಿದ್ದಾರೆ.
https://twitter.com/directorprems/status/1827555343108305211
ನಟ ದರ್ಶನ್ ಅವರು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನ ಕೊಲೆ ಪ್ರಕರಣದಲ್ಲಿ ಜೈಲು ಸೇರಿಸಿದ್ದಾರೆ. ಇವರೊಂದಿಗೆ ಆಪ್ತ ಗೆಳತಿ ಪವಿತ್ರಾಗೌಡ ಸೇರಿ 19 ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಆಗ್ಟ್ 28ರ ತನಕ ನ್ಯಾಯಾಂಗ ಬಂಧನವೆಂದು ಕೋರ್ಟ್ ಹೇಳಿದೆ. ಇನ್ನು ಇತ್ತೀಚೆಗೆ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರ ಮಾಧ್ಯಮಗೋಷ್ಠಿ ನಡೆಸಿ ಆದಷ್ಟು ಬೇಗ ಕೋರ್ಟಿಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು ಎಂದಿದ್ದಾರೆ. ಕಳೆದ 2 ತಿಂಗಳಿಗೂ ಹೆಚ್ಚು ದಿನಗಳಿಂದ ನಟ ದರ್ಶನ್ ಅಂಡ್ ಗ್ಯಾಂಗ್ ಜೈಲಿನಲ್ಲಿದೆ.



