LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ದರ್ಶನ್, ಪವಿತ್ರಾಗೌಡ ಜಾಮೀನು ರದ್ದುಗೊಳಿಸಲು ಸುಪ್ರೀಂ ನಿರಾಕರಣೆ

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನ ಕೊಲೆ(Murder Case) ಪ್ರಕರಣದಲ್ಲಿ ಆರೋಪಿಗಳಾದ ನಟ(D Boss) ದರ್ಶನ್, ಇವರ ಸ್ನೇಹಿತೆ ಪವಿತ್ರಾಗೌಡ ಸೇರಿ 7 ಮಂದಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ನೋಟಿಸ್ ನೀಡಿದೆ. ಕರ್ನಾಟಕ ಹೈಕೋರ್ಟ್ ನೀಡಿರುವ ಜಾಮೀನು ಆದೇಶವನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದೆ. ಇದರ ವಿಚಾರಣೆ ಇಂದು ನಡೆಯಿತು. ಸರ್ಕಾರದ ಪರವಾಗಿ ಹಿರಿಯ ವಕೀಲರಾದ ಸಿದ್ಧಾರ್ಥ್ ಲೋತ್ರಾ ವಾದ ಮಂಡಿಸಿದರು. ಎ1 ಪವಿತ್ರಾಗೌಡ, ಎ2 ದರ್ಶನ್ ಸೇರಿ ದರ್ಶನ್ ಮ್ಯಾನೇಜರ್ ನಾಗರಾಜ್, ಸ್ನೇಹಿತರಾದ ಪ್ರದೋಶ್, ಅನುಕುಮಾರ್, ಲಕ್ಷ್ಮಣ, ಜಗದೀಶ್ ಸೇರಿ 7 ಆರೋಪಿಗಳಿಗೆ ನೋಟಿಸ್ ನೀಡಲಾಗಿದೆ.

ಇನ್ನು ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್(Supreme Court) ನಿರಾಕರಣೆ ಮಾಡಿದೆ. ಹೀಗಾಗಿ ಆರೋಪಿಗಳಿಗೆ ಮರಳಿ ಜೀವ ಬಂದಂತಾಗಿದೆ. ಆದರೆ, ಕರ್ನಾಟಕ ಸರ್ಕಾರ ಸಲ್ಲಿಸಿದ ಅರ್ಜಿಯ ಸವಾಲನ್ನು ಪರಿಶೀಲನೆ ಮಾಡಲು ಒಪ್ಪಿಕೊಂಡಿದೆ. ನ್ಯಾಯಮೂರ್ತಿಗಳಾದ ಜೆ.ಬಿ ಪಾರ್ದಿವಾಲಾ, ಆರ್.ಮಹದೇವನ್ ಅವರಿದ್ದ ಪೀಠ ನೋಟಿಸ್ ಜಾರಿ ಮಾಡಿದೆ. ನಮ್ಮ ಮುಂದೆ ಸಲ್ಲಿಸಿದ ಜಾಮೀನಿನ ಅರ್ಜಿ ಸ್ವಂತ ಬಲದ ಮೇಲೆ ನಿಂತಿರುತ್ತದೆ. ಜಾಮೀನಿಗಾಗಿ(Bail) ಆರೋಪಿಗಳು ಪ್ರಾರ್ಥಿಸುತ್ತಿರುತ್ತಾರೆ. ಅದೆಲ್ಲವನ್ನು ನೋಡಿಕೊಂಡು ತೀರ್ಮಾನ ತೆಗೆದುಕೊಳ್ಳಲಾಗಿರುತ್ತೆ ಎಂದು ಪೀಠ ಹೇಳಿದೆ. ನಟ ದರ್ಶನ್ ಸೇರಿ 7 ಆರೋಪಿಗಳಿಗೆ ನಿಯಮಿತ ಜಾಮೀನುನನ್ನು ಡಿಸೆಂಬರ್ 13, 2024ರಂದು ನೀಡಿದೆ.

ಜೂನ್ 11, 2024ರಂದು ನಟ ದರ್ಶನರನ್ನು ಮೈಸೂರಿನಲ್ಲಿ ಬಂಧಿಸಲಾಗುತ್ತೆ. ಜೂನ್ 8ರಂದು ಘಟನೆ ಬಳಕೆಗೆ ಬಂದಿರುತ್ತೆ. ಮುಂದೆ ಸ್ನೇಹಿತೆ ಪವಿತ್ರಾಗೌಡ, ಸ್ನೇಹಿತರು ಸೇರಿ 17 ಆರೋಪಿಗಳ ಬಂಧನವಾಗುತ್ತೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗುತ್ತಾರೆ. ಮುಂದೆ ಸುಮಾರು 3 ತಿಂಗಳಲ್ಲಿ ಜೈಲಿನಲ್ಲಿನ ಫೋಟೋವೊಂದು ವೈರಲ್ ಆಗಿ ನಟ ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರಗೊಳ್ಳುತ್ತಾರೆ. ವೈದ್ಯಕೀಯ ಕಾರಣಕ್ಕೆ ಅಕ್ಟೋಬರ್ 30, 2024ರಂದು 6 ವಾರಗಳ ಮಧ್ಯಂತರ ಜಾಮೀನು ನೀಡಲಾಗುತ್ತೆ. ಇದು ಮುಗಿಯುವ ಹೊತ್ತಿಗೆ ನಿಯಮಿತ ಜಾಮೀನು ಸಿಕ್ಕು ಬಿಡುತ್ತೆ. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ರಾಜ್ಯ ಸರ್ಕಾರ ಜನವರಿ 6, 2025ರಂದು ಅರ್ಜಿ ಸಲ್ಲಿಸಿದೆ. ಅದರ ವಿಚಾರಣೆ ಇಂದು ನಡೆಯಿತು.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST