ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸರ್ಕಾರಿ ನೌಕರರ ವರ್ಗಾವಣೆ ವಿಚಾರಕ್ಕೆಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಹೈಕೋರ್ಟ್ ರಿಟ್ ಅರ್ಜಿ ಸಂಖ್ಯೆ 35777/25ರ ತೀರ್ಪನ್ನು ಜಾರಿಗೊಳಿಸುವ ಕುರಿತು ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ. ಕೋರ್ಟ್ ನಿರ್ದೇಶನದಂತೆ ಸ್ಥಳ ನಿಯುಕ್ತ ಮಾಡದೆ ಅನಿರ್ದಿಷ್ಟಾವಧಿಗೆ ಕಡ್ಡಾಯ ನಿರೀಕ್ಷಣೆಯಲ್ಲಿಡುವುದು ಕಾನೂನು ಬಾಹಿರ. ಈ ನಿಯಮ ಉಲ್ಲಂಘಿಸಿದರೆ ಸಂಬಂಧಿತ ಸಕ್ಷಮ ಪ್ರಾಧಿಕರಗಳಿಂದ ಪಾತಿಯಾದ ವೇತನ, ಭತ್ಯಯನ್ನು ಮಸೂಲಿ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಹೊಸ ಮಾರ್ಗಸೂಚಿಯ ಪ್ರಮುಖ ಅಂಶಗಳು: ಯಾವುದೇ ಅಧಿಕಾರಿ, ನೌಕರರನ್ನು ವರ್ಗಾವಣೆ ಮಾಡುವ ಸಂದರ್ಭದಲ್ಲಿ ಅವರಿಗೆ ಮುಂದಿನ ಹುದ್ದೆ ಸೂಚಿಸದೆ ವರ್ಗಾವಣೆ ಮಾಡುವಂತಿಲ್ಲ. ಕಾನೂನು ಸಂಬಂಧಿಸಿದ ವಿಚಾರಗಳು, ಅಧಿಕಾರ ದುರುಪಯೋಗ, ಹಣ ದುರುಪಯೋಗ, ಅಮಾನತು ಸೇರಿ ಇತರೆ ತೀವ್ರ ಸ್ವರೂಪದ ಇಲಾಖೆಯ ವಿಚಾರಣೆ, ಗಂಭೀರ ಆರೋಪಗಳು ಬಾಕಿಯಿರುವ ಪ್ರಕರಣಗಳನ್ನು ಹೊರತುಪಡಿಸಿ ಅಧಿಕಾರಿ, ನೌಕರರಿಗೆ ತಕ್ಷಣ ಸ್ಥಳ ನಿಯುಕ್ತಗೊಳಿಸಲು ಸಾಧ್ಯವಾಗದಿದ್ದಲ್ಲಿ ಗರಿಷ್ಠಿ ಒಂದು ತಿಂಗಳಿಗಿಂತ ಹೆಚ್ಚು ನಿರೀಕ್ಷಣೆಯಲ್ಲಿ ಇಡುವಂತಿಲ್ಲ.
ವರ್ಗಾವಣೆಗೊಂಡ ನೌಕರರನ್ನು ಒಂದು ತಿಂಗಳಿಂತ ಹೆಚ್ಚು ಕಾಲ ಕಡ್ಡಾಯವಾಗಿ ನಿರೀಕ್ಷಣೆಯಲ್ಲಿ ಇಡುವಂತಹ ಆಡಳಿತಾತ್ಮಕ ಅನಿವಾರ್ಯ ಇದ್ದಲ್ಲಿ ಸಂಬಂಧಿಸಿದ ಪ್ರಾಧಿಕಾರಿಗಳು ಸೂಕ್ತ ಕಾರಣಗಳನ್ನು ಲಿಖಿತವಾಗಿ ದಾಖಲಿಸಬೇಕು. ಮುಖ್ಯಮಂತ್ರಿಗಳ ಪೂರ್ವಾನುಮತಿ ಪಡೆದು ಗರಿಷ್ಠ ಮೂರು ತಿಂಗಳ ಕಾಲ ನಿರೀಕ್ಷಣೆಯಲ್ಲಿರಿಸಬಹುದು. ಈ ಕುರಿತು ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪ್ರತಿಭಾ.ಕೆ ಅವರು ಆದೇಶ ಹೊರಡಿಸಿದ್ದಾರೆ.



