RCB ಅಭಿಮಾನಿಗಳ ಕನಸು ಮತ್ತೆ ಭಗ್ನ…

84

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಅಹಮದಾಬಾದ್: ಐಪಿಎಲ್-2024 ಟೂರ್ನಿಯಲ್ಲಾದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆಲ್ಲುತ್ತೆ ಎನ್ನುವ ಅಭಿಮಾನಿಗಳ ನಂಬಿಕೆ ಮತ್ತೆ ಹುಸಿಯಾಗಿದೆ. ಬುಧವಾರ ಸಂಜೆ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತು ಟೂರ್ನಿಯಿಂದ ಹೊರ ಬಿದ್ದಿತು.

ಟಾಸ್ ಗೆದ್ದ ಆರ್ ಆರ್ ನಾಯಕ ಸಂಜು ಸ್ಯಾಮನ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅವರ ನಿರ್ಧಾರವನ್ನು ಬೌಲರ್ ಗಳು ಸರಿಯಾಗಿಸಿದರು. ಹೀಗಾಗಿ ಬೆಂಗಳೂರು ತಂಡದಿಂದ ದೊಡ್ಡ ಆಟ ಬರಲೇ ಇಲ್ಲ. ಕೊಹ್ಲಿ 33, ಪಟೇದಾರ್ 34, ಲೊಮರರ್ 32 ರನ್ ಗಳೇ ಗರಿಷ್ಠ ಸ್ಕೋರ್. ಇಡೀ ಟೂರ್ನಿಯುದ್ದಕ್ಕೂ ಫೇಲ್ ಆದ ಮ್ಯಾಕ್ಸ್ ವೆಲ್ ನಿರ್ಣಾಯಕ ಪಂದ್ಯದಲ್ಲೂ ಕೈ ಕೊಟ್ಟ. ಹೀಗಾಗಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ಆವೇಶ್ ಖಾನ್ 3, ಅಶ್ವಿನ್ 2 ವಿಕೆಟ್ ಪಡೆದು ಮಿಂಚಿದರು.

ಈ ಸ್ಕೋರ್ ಚೇಸ್ ಮಾಡಿದ ಆರ್ ಆರ್ ಪಡೆ 19 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಯಶಸ್ವಿ ಜೈಸ್ವಾಲ್ 45, ರಿಯಾನ್ ಪರಾಗ್ 36, ಹಿಟ್ಮಯರ್ 26, ಕಾಡ್ ಮೋರ್ 20, ಪೋವೆಲ್ 16 ರನ್ ಗಳಿಸಿದರು. ರವಿಚಂದ್ರನ್ ಅಶ್ವಿನ್ ಮ್ಯಾನ್ ಆಫ್ ದಿ ಪ್ಲೇಯರ್ ಆದರು. ನಾಳೆ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್ ಆರ್ ಕಣಕ್ಕೆ ಇಳಿಯಲಿದೆ. ಇಲ್ಲಿ ಗೆದ್ದವರು ಫೈನಲ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!