ಜಾತಿ ಜನಗಣತಿ – ಅವಕಾಶ ವಂಚಿತರ ಸಮಾಜಿಕ ಸ್ಥಿತಿಗತಿಗಳ ಚಿಂತನೆಗೆ ದೂಡುವ ಪ್ರಶ್ನೆ

272

ವಿಶೇಷ ಲೇಖನ, ಬಸವ ಪಾಟೀಲ ಕೊಂಡಗೂಳಿ, ಯುಕೆ ನಿವಾಸಿ

ಜಾತಿ ಹುಟ್ಟಿದ್ದು ಇಲ್ಲೆ ಅದು ಸ್ಥಾಪಿತವಾಗಿದ್ದು ಇಲ್ಲೆ. ಆದರೆ ಅದನ್ನ ಮೊದಲು ತಮ್ಮ ಅನುಕೂಲಕ್ಕಾಗಿ ಉಪಯೋಗಿಸಿಕೊಂಡು ಅದನ್ನೆ ಸ್ವತಂತ್ರ ಸಿಕ್ಕು 77 ವರ್ಷ ಗತಿಸಿದರೂ ಪೋಷಿಸಿ ಬೆಳಿಸಿದ್ದು ಭಾರತೀಯ ಸಮಾಜ. ಈಗ “ಹಿಂದು ನಾವೆಲ್ಲ ಒಂದು’’ ಅನ್ನು ಪಾಲಿಟಿಕಲ್ ಪ್ರೊಪಗಂಡಾ ಮಾಡತಾ ಇದೆ. ಆ ವಿಚಾರಧಾರೆಯಲ್ಲಿ ಬುದ್ಧ “11ನೇ ಅವತಾರ ಆಗತಾನೆ. ಬಸವಣ್ಣ “ಸಮಾಜ ಸುಧಾರಕ’’ ಆಗಾತಾನೆ. ತೀರ ಇತ್ತೀಚೆಗೆ ಬಾಬಾಸಾಹೇಬರ “ಪಂಚ ತೀರ್ಥಗಳು’’  ಅನ್ನುವ ವೈಚಾರಿಕ ದ್ವಂದ್ವಗಳು ಸೃಷ್ಟಿಯ ಪರ್ವ!

ವೈದಿಕವಾದದ/ಮನುವಾದದ ಹೊಸ ತಲೆಮಾರಿನ ಜನ ಈಗ ವರ್ಣ ಏನು ತಪ್ಪಲ್ಲ, ಆದರೆ ಜಾತಿ ಇರಬಾರದು. ಈ ಜಾತಿಯ ಪದ ಹೊರಗಿನದಿಂದ ಬಂದಿದ್ದು ಅಂತ ಹೇಳತಾರೆ. ಇನ್ನೊಬ್ಬ ಬಲಪಂಥೀಯ ಹುಡುಗ “ಜಾತಿ ಇದು ಪಾಶ್ಚಾತ್ಯ ಕೃತ’’ ಅಂತ ಭಾಷ್ಯ ಬರಿತಾನೆ. ಒಂದ ಆಂಗ್ಲ ನುಡಿಯ ಪತ್ರಿಕೆಯಲ್ಲಿ ಆ ಪತ್ರಿಕೆಯ ಮಾಲೀಕ, ಸಂಪಾದಕ ಮತ್ತು ಬರೆದ ಬರಹಗಾರ “ಕಲ್ಪಿತ ಶ್ರೇಷ್ಟತೆಯ’’ ವ್ಯಸನದವರು ಅಂತ ಬಹುತೇಕ ಜನರಿಗೆ ಮನವರಿಕೆಯಾಗಿದೆ. ಆದರೂ ಮನ್ವಂತರ ಅಥವಾ ಮತಾಂತರ ಆಗಿಲ್ಲ. ಯಾವ ತತ್ವ ಮನುವಾದ ಮತ್ತು ವರ್ಣಾಶ್ರಮ ಎತ್ತಿ ಹಿಡಿಯುತೊ ಅದೇ ತತ್ವ, ಮತಾಂತರ ನಿಷೇಧ ಮಾಡುವ ಕಾನೂನು ತರುತ್ತೆ. ಶ್ರಮಿಕ ವರ್ಗ ಇದನ್ನ ಪ್ರಶ್ನಿಸೋದೆ ಇಲ್ಲ, ಯಾಕೆಂದರೆ ಅವರು ಮತ ನೀಡಿದ್ದು ತಮ್ಮ ಧ್ವನಿಯನ್ನ ಎತ್ತಿ ಹಿಡಿಯುವವರು ಅಂತ ವಿಶ್ವಾಸದಿಂದ. ಅಂತಹ ಪ್ರಮಾಣಿಕ ಮತದಾರರನ್ನ ಕೂಡಾ ಈ ನಾಡಿನಲ್ಲಿ/ದೇಶದಲ್ಲಿ “ಬಿಟ್ಟಿ ಭಾಗ್ಯಕ್ಕೆ’’ ಮತ ನೀಡಿದವರು ಅಂತ ಹಿಯಾಳಿಸಿದವರು ಕೂಡಾ ಇದೆ “ಕುಲ ಶ್ರೇಷ್ಟರು’’.

ಅಷ್ಟೇ ಅಲ್ಲ ಸೈಮನ್ ಗೋ ಬ್ಯಾಕ್ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದವರೆ, ಈಗ ಜಾತಿ ಗಣತಿ ಅವೈಜ್ಞಾನಿಕ ಅಂತ ಅಪಸ್ವರ ಹಾಡಾತಾ ಇದಾರೆ. ಇವರು ಆವತ್ತು ಕಾಂಗ್ರೆಸ್ ನಲ್ಲಿದ್ದರು, ಇವತ್ತು ಭಾಜಪದಲ್ಲಿದ್ದಾರೆ. ದಮನಿತ ವರ್ಗಗಳ ಪ್ರತಿನಿಧಿಯಾಗಿ ಸೈಮನ್ ಆಯೋಗಕ್ಕ ಬಾಬಾಸಾಹೇಬರು ಹೋದಾಗ ಕಲ್ಲು ಹೊಡೆದವರು ಮನಸ್ಥಿತಿ ಈಗಲೂ ಜೀವಂತ ಇದೆ. ಹ್ಯಾಂಗಂದರೆ “ಶಾಸ್ವತ ಆಯೋಗ’’ ರಚಿಸಿದ ಪಕ್ಷದ ಒಬ್ಬ ಹಿರಿಯ (ವಯಸ್ಸಿನಲ್ಲಿ) ಇದು “ಅವೈಜ್ಞಾನಿಕ’’ ಅಂತ ಅಪಸ್ವರ ತೆಗಿದಿದ್ದಾರೆ ನಮ್ಮ ನಾಡಿನಲ್ಲಿ! ಇಂತಹ “ಕುಲ ಶ್ರೇಷ್ಟರ’’ ಖಯ್ಯಾಲಿ ತನಕ್ಕ ಜನ ಮಾರು ಹೋಗಬಾರದು. ಗಣತಿನೆ ಒಂದು ವೈಜ್ಞಾನಿಕ ಪ್ರಕ್ರಿಯೆ ಅದರಲ್ಲಿ ಏನು “ಅವೈಜ್ಞಾನಿಕತೆ’’ ಹುಡುಕಿದರು ಇವರು? ತಮ್ಮ ದೇವರನ್ನೆ ಕಲ್ಲೋಧ್ಭವ ಅಂತ ನಂಬಿದವರು ಇವರು. ಸಮಾಜಿಕ ಸಂವೇದನೆಯ ಕೆಲಸದಲ್ಲಿ ವೈಜ್ಞಾನಿಕತೆಯ ವಿಚಾರ ಬಯಸ್ತಾ ಇದಾರೆ.

ಇನ್ನೊಬ್ಬ ಕುಲ ಶ್ರೇಷ್ಟ ನನ್ನ ಸಂದರ್ಶನ ಮಾಡಲೇ ಇಲ್ಲ ಅಂತ ಹೇಳಿಕೆ, (ಸಂಶಯ- ಶಬ್ಧ ದಾರಿದ್ರ್ಯ ಇರುವ ಮಾಧ್ಯಮ ತಿರುಚಿ ಬರೆದರು ಬರೀದರಬಹುದು) ಈ ಮಾಧ್ಯಮ ವರದಿಯನ್ನ ಆಧರಿಸಿ ಪ್ರತಿಕ್ರಿಯಿಸಬೇಕಾದರೆ, ನೀವು ಚುನಾಯಿತರೆ? ಒಬ್ಬ ನಾಗರಿಕನಾಗಿ ನಿಮ್ಮನ್ನ ಗಣತಿಯ ಭಾಗವಿಗೀಸದೆ ಇದ್ದರೆ ಅದು ಅಧಿಕಾರಿಗಳ ಕರ್ತ್ಯವ್ಯ ಲೋಪ ಅದನ್ನ ಪ್ರಶ್ನಿಸಬಹುದು. ಆದರೆ ಅಕಸ್ಮಾತ ಯಾರೊ ಅಧಿಕಾರಿಗಳು ನಿಮ್ಮ ವಾಸ್ತವ ಇರುವ ಸ್ಥಳಕ್ಕೆ ಬಂದು ನಿಮ್ಮ ಜಾತಿ ಯಾವುದು? ನಿಮ್ಮ ಶಿಕ್ಷಣ ಏನು? ನಿಮ್ಮ ಕೆಲಸ ಏನು ಅಂತ ಕೇಳಿದರೆ ನಾಗರೀಕ ಪ್ರಜ್ಞೆಯಿಂದ ಉತ್ತರ ಕೊಡತಿದ್ದರಾ?

ಇಂತಹ ಮೂರು ಅಪಸ್ವರಗಳು ನನ್ನ ಅರಿವಿಗೆ ಬಂದಿದ್ದು. ಆದರೆ ಮನುವಾದದ ಉತ್ತರದಾಯಿ ಮಾಧ್ಯಮಗಳು ಇದನ್ನ ಮುಖ್ಯವಾಹಿನಿಗೆ ತರಲೆ ಇಲ್ಲ (ಎರಡು ಚರ್ಚೆಗಳ ಸಾರಾಂಶ ನೋಡಿದೆ ಅದರಲ್ಲಿ ಸತ್ವನು ಇರಲಿಲ್ಲ, ತತ್ವನೂ ಇರಲಿಲ್ಲ. ಅದು ಸ್ವಾಭಾವಿಕ ಮನುವಾದ ಪ್ರಚಾರ ಮಾಡೋದು ದುಡ್ಡು ಕೊಟ್ಟರೆ ಬೇಕಾದು ಸಿಗತಾದೆ ಈ ಜಗದಲಿ ಕಾಣೊ ಅನ್ನುವ ತತ್ವ ನಂಬಿದವರು.

ಆದರು ನಮ್ಮ ನಾಡಿನಲ್ಲಿ ಸುಮಾರು 8 ವರ್ಷಗಳ ಕಾಲ, ರಾಜಕಾರಣದ ಇಚ್ಛಾಶಕ್ತಿಯ ಕೊರತೆಯಿಂದ ಬೆಳುಕು ಕಾಣದೆ ಹೋಗಿತ್ತು. ಈ ಗಣತಿಗೆ ಅಂತಹ ಒತ್ತಡವು ಇರಲಿಲ್ಲ ಮತ್ತು ಆಶಯವು ಇರಲಿಲ್ಲ. ಈಗ ಮೇಲ್ನೋಟಕ್ಕೆ ಕಂಡಿದ್ದು ದಲಿತರು (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಸೇರಿ) ಮತ್ತು ಮುಸಲ್ಮಾನರು ನಮ್ಮ ನಾಡಿನ ಬಹು ಸಂಖ್ಯಾತರು.  ಅದಕ್ಕ ಈಗಿರುವ ಸರಕಾರ ನಮ್ಮ ನುಡಿ, ನಮ್ಮ ದೇವರ ಕಲ್ಪನೆ, ನಮ್ಮ ಆಹಾರ, ನಮ್ಮ ಅಭಿವ್ಯಕ್ತಿ, ನಮ್ಮ ಧರ್ಮ, ನಮ್ಮ ಆರ್ಥಿಕ ನಿಲುವು ಪ್ರತಿಪಾದಿಸಬೇಕು. ಇವ್ಯಾವೊ ಅಸ್ಪೃಶ್ಯರು, ಇವ್ಯಾವೊ ರೈಸ್ ಬ್ಯಾಗ್, ಇವ್ಯಾವೊ ಹೋರಾಟಗಾರು ಅಂತ ಅವಹೇಳನ ಮಾಡುವ ಮನುವ್ಯಾಧಿ ತತ್ವ ಅಳಿಯಬೇಕು.

ಇವ ನಮ್ಮವ ಇವ ನಮ್ಮವ ಇವನಮ್ಮವನೆಂದಿನಿಸಯ್ಯಾ. ಕೂಡಲ ಸಂಗಮದೇವಾ, ನಿಮ್ಮ ಮನೆಯ ಮಗನೆಂದೆನಿಸಯ್ಯಾ’’ ಅನ್ನುವ ತತ್ವ ಸ್ಥಾಪನೆಯಾಗಲಿ.

ಬಸವ ಪಾಟೀಲ ಕೊಂಡಗೂಳಿ, ಲೇಖಕರು



Leave a Reply

Your email address will not be published. Required fields are marked *

error: Content is protected !!