ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆಯ ಪುತ್ರ ಸೇರಿ ನಾಲ್ವರ ಹತ್ಯೆ

120

ಪ್ರಜಾಸ್ತ್ರ ಅಪರಾಧ ಸುದ್ದಿ

ಗದಗ: ಜಿಲ್ಲೆಯ ಗದಗ ಬೆಟಗೇರಿ ನಗರಸಭೆಯ ಅಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ ಸೇರಿ ನಾಲ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ. ದಾಸರ ಓಣಿಯಲ್ಲಿರುವ ಮನೆಯಲ್ಲಿ ಗುರವಾರ ತಡರಾತ್ರಿ ಈ ಕೃತ್ಯ ನಡೆದಿದೆ.

ಸುನಂದಾ ಬಾಕಳೆ ಅವರ ಪುತ್ರ ಕಾರ್ತಿಕ್(27), ಪರಶುರಾಮ್(55), ಲಕ್ಷ್ಮಿ(45) ಹಾಗೂ ಆಕಾಂಕ್ಷ(17) ಕೊಲೆಯಾದವರು. ಈ ಘಟನೆಯಿಂದ ಇಡೀ ನಗರದ ಜನತೆ ಬೆಚ್ಚಿ ಬಿದ್ದಿದ್ದಾರೆ. ಕಾರ್ತಿಕ್ ನಿಶ್ಚಿತಾರ್ಥದ ಕಾರ್ಯಕ್ರಮದ ಸಲುವಾಗಿ ಏಪ್ರಿಲ್ 17ರಂದು ಸಂಬಂಧಿಕರು ಮನೆಗೆ ಬಂದಿದ್ದರು. ಮನೆಯ ಮೊದಲ ಮಹಡಿಯಲ್ಲಿ ಏಪ್ರಿಲ್ 18ರ ಮಧ್ಯರಾತ್ರಿ ಈ ಘಟನೆ ನಡೆದಿದೆ.

ಹೋಟೆಲ್ ಉದ್ಯಮಿಯಾಗಿದ್ದ ಪರಶುರಾಮ್ ಹಾದಿಮನಿ, ಲಕ್ಷ್ಮಿ, ಆಕಾಂಕ್ಷ ಕೊಪ್ಪಳದ ಭಾಗ್ಯನಗರದಲ್ಲಿ ವಾಸವಾಗಿದ್ದರು. ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ ಪಾಟೀಲ ಸೇರಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಯಾವ ಕಾರಣಕ್ಕೆ ನಾಲ್ವರ ಕೊಲೆ ನಡೆದಿದೆ ಅನ್ನೋ ನಿಗೂಢತೆ ಮೂಡಿದೆ.
Leave a Reply

Your email address will not be published. Required fields are marked *

error: Content is protected !!