ಗ್ಯಾರಂಟಿ ನಂಬಿದ ಕೈ ಹುರಿಯಾಳುಗಳು.. ಮೋದಿ ನೆಚ್ಚಿಕೊಂಡ ಕಮಲ ಕಲಿಗಳು

84

ಪ್ರಜಾಸ್ತ್ರ ಡೆಸ್ಕ್

ಬೆಂಗಳೂರು: ಲೋಕಸಭಾ ಚುನಾವಣೆಯ ಕಾವು ಜೋರಾಗುತ್ತಿದೆ. ಸೂರ್ಯನ ಕಡುತಾಪಕ್ಕೆ ಒಂದು ಕಡೆ ಜನರು ಹೈರಾಣಾಗುತ್ತಿದ್ದರೆ, ಮತ್ತೊಂದು ಕಡೆ ಚುನಾವಣೆಯ ಅಬ್ಬರದ ಪ್ರಚಾರದಲ್ಲಿ ಮಿಂದೇಳುತ್ತಿದ್ದಾರೆ. ರಾಜ್ಯದಲ್ಲಿ ಮೇ 7ರಂದು 2ನೇ ಹಂತದ ಮತದಾನ ನಡೆಯುತ್ತಿದ್ದು, ಉತ್ತರ ಕರ್ನಾಟಕದತ್ತ ರಾಜಕೀಯ ನಾಯಕರ ಓಡಾಟ ಜೋರಾಗಿದೆ.

ಕಾಂಗ್ರೆಸ್ ಅಭ್ಯರ್ಥಿಗಳು ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳನ್ನು ನಂಬಿಕೊಂಡಿದ್ದಾರೆ. ಯಾವುದೇ ಪ್ರಚಾರ, ಸಮಾವೇಶದಲ್ಲಿ ಪಂಚ ಗ್ಯಾರಂಟಿಗಳ ಬಗ್ಗೆನೇ ಮಾತ್ನಾಡ್ತಿದ್ದಾರೆ. ನುಡಿದಂತೆ ನಡೆದ ಸರ್ಕಾರ ನಮ್ಮದು. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಕರ್ನಾಟಕ ಮಾದರಿಯಲ್ಲಿಯೇ ಘೋಷಣೆ ಮಾಡಿರುವ 25 ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ ಎನ್ನುತ್ತಿದ್ದಾರೆ.

ವಾರ್ಷಿಕ ಬಡ ಮಹಿಳೆಯರಿಗೆ 1 ಲಕ್ಷ ರೂಪಾಯಿ, ರೈತರ ಸಾಲ ಮನ್ನಾ, ವಿದ್ಯಾವಂತ ಯುವಕನಿಗೆ 1 ಲಕ್ಷ ವೇತನದ ಉದ್ಯೋಗ ಗ್ಯಾರಂಟಿ, ಮನರೇಗಾ ಮೂಲಕ ಶ್ರಮಿಕ ವರ್ಗಕ್ಕೆ ದಿನಕ್ಕೆ 400 ರೂಪಾಯಿ ವೇತನ, ಜಾತಿಗಣತಿ ಸೇರಿ ಹಲವು ಗ್ಯಾರಂಟಿಗಳನ್ನು ಘೋಷಿಸಿದೆ. ಇದನ್ನು ಕಾಂಗ್ರೆಸ್ ಅಭ್ಯರ್ಥಿಗಳು ಮತದಾರರಿಗೆ ಭರವಸೆ ನೀಡುತ್ತಿದ್ದಾರೆ.

ಇನ್ನು ಬಿಜೆಪಿ ಅಭ್ಯರ್ಥಿಗಳು ಪ್ರಧಾನಿ ಮೋದಿಯನ್ನು ಮಾತ್ರ ನಂಬಿಕೊಂಡಿದ್ದಾರೆ. ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಬಿಜೆಪಿ ಮತ ನೀಡಿ ಎನ್ನುತ್ತಿದ್ದಾರೆ. ಅನೇಕ ಹಾಲಿ ಸಂಸದರು ನಮ್ಮ ನೋಡಿ ಯಾರೂ ಮತ ಹಾಕಲ್ಲ. ಮೋದಿ ನೋಡಿ ಹಾಕುತ್ತಾರೆ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಇದರ ಜೊತೆಗೆ ರಾಮ ಮಂದಿರ ವಿಚಾರ, ಆರ್ಟಿಕಲ್ 370 ವಿಷಯ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರಿಗೆ ಸಂಪತ್ತು ಹಂಚಿಕೆ ವಿಚಾರ. ಇದಿಷ್ಟು ಯಾವ ವಿಚಾರನ್ನು ಬಿಜೆಪಿ ಜನರ ಮುಂದೆ ಇಡುತ್ತಿಲ್ಲ. ಅದರಲ್ಲಿ ಅತಿ ಹೆಚ್ಚು ಪ್ರಚಾರ ಮಾಡುತ್ತಿರುವುದು ಮತ್ತೊಮ್ಮೆ ಮೋದಿಗಾಗಿ ಎನ್ನುವುದು.

ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದು ಸಂವಿಧಾನ ಬದಲು ಮಾಡುತ್ತೆ. ಪ್ರಜಾಪ್ರಭುತ್ವ ಕೊನೆಯಾಗಿಣಿಸುತ್ತೆ. ಹಿಂದುಳಿದವರು, ದಲಿತರು, ಆದಿವಾಸಿಗಳು ಸೇರಿದಂತೆ ಬಹುಸಂಖ್ಯಾತ ಜನರನ್ನು ಸರ್ವನಾಶ ಮಾಡುತ್ತೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೆಚ್ಚು ಮಕ್ಕಳು ಹೊಂದಿದವರಿಗೆ ಸಂಪತ್ತು ಹಂಚಿಕೆ, ನಿಮ್ಮ ಮಂಗಳಸೂತ್ರ ಸಹ ಬಿಡುವುದಿಲ್ಲ ಎನ್ನುವ ಮಾತುಗಳು. ಆದರೆ, ಯಾವುದೇ ತನ್ನ ಹಕ್ಕು ಚಲಾಯಿಸುತ್ತಾನೆ ಎನ್ನುವ ಕುತೂಹಲವಿದೆ. ಬದುಕು ಹಾಗೂ ಭಾವನೆ ನಡುವಿನ ಸಂಘರ್ಷದಲ್ಲಿ ಯಾವುದಕ್ಕೆ ಗೆಲುವು ಅನ್ನೋದು ಜೂನ್ 4ಕ್ಕೆ ತಿಳಿಯಲಿದೆ.




Leave a Reply

Your email address will not be published. Required fields are marked *

error: Content is protected !!