ಕೊನೆಗೂ ‘ಆ’ ಕಾರಳ ಘಟನೆ ಬಗ್ಗೆ ಮೌನ ಮುರಿದ ಭಾವನಾ

470

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಹುಭಾಷಾ ತಾರೆ ನಟಿ ಭಾವನಾ ಈಗ ಕನ್ನಡದವರೆ ಆಗಿದ್ದಾರೆ. ಅಷ್ಟರ ಮಟ್ಟಿಗೆ ಅವರು ಕನ್ನಡದಲ್ಲಿ ಬ್ಯುಸಿಯಾಗಿದ್ದಾರೆ. ಇಂತಹ ಮುದ್ದಾದ ನಟಿಯ ಬಾಳಲ್ಲಿ ಐದು ವರ್ಷಗಳ ಹಿಂದೆ ಕಹಿ ಘಟನೆಯೊಂದ ನಡೆದು ಹೋಗಿದೆ. ಅದನ್ನು ಪೊಲೀಸರು ಸಹ ಬಹಿರಂಗ ಪಡಿಸಿರಲಿಲ್ಲ. ಆದರೆ, ಇದೀಗ ನಟಿಯೇ ಮೌನ ಮುರಿದ್ದಾಳೆ.

ನಟಿ ಭಾವನಾ ಶೂಟಿಂಗ್ ಮುಗಿಸಿ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಕಿಡಿಗೇಡಿಗಳು ಲೈಂಗಿಕ ದೌರ್ಜನ್ಯವೆಸಗಿದ್ದರು. ಈ ಘಟನೆ ಬಗ್ಗೆ ನಟಿಯ ಹೆಸರನ್ನು ಗೌಪ್ಯವಾಗಿ ಇಡಲಾಗಿತ್ತು. ಈ ಪ್ರಕರಣದಲ್ಲಿ ನಟ ದಿಲೀಪರನ್ನು ಬಂಧಿಸಲಾಗಿತ್ತು. ಈಗ ಜಾಮೀನು ಮೇಲೆ ಹೊರಗಿದ್ದಾರೆ. ನಟಿ ಭಾವನಾ ಸೋಷಿಯಲ್ ಮೀಡಿಯಾ ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

ಈ ಪಯಣ ಅಷ್ಟೊಂದು ಸುಲಭವಾಗಿರಲಿಲ್ಲ. ನನ್ನ ದನಿಯನ್ನು ಅಡಗಿಸುವ ಕೆಲಸ ಸಾಕಷ್ಟು ಆಯ್ತು. ಹೀಗಾಗಿ ನಾನು ಸುಮ್ಮನಿರುವುದರ ಜೊತೆಗೆ ತೆರೆಯಿಂದ ದೂರವಿರಬೇಕಿತ್ತು. ನನ್ನ ಪರವಾಗಿ ಸಾಕಷ್ಟು ದನಿಗಳು ಕೇಳಿ ಬಂದವು. ಹೀಗಾಗಿ ನ್ಯಾಯದ ಹಾದಿಯಲ್ಲಿ ನಾನು ಒಂಟಿ ಅಲ್ಲ ಅನ್ನೋದು ತಿಳಿಯಿತು. ತಪ್ಪಿಸ್ಥರಿಗೆ ಶಿಕ್ಷೆಯಾಗುವುದನ್ನು ನೋಡಲು ಕಾಯುತ್ತಿದ್ದೇನೆ. ಇದಕ್ಕಾಗಿ ಹೋರಾಟ ಮಾಡುತ್ತೇನೆ. ಇದರಲ್ಲಿ ನನ್ನ ಜೊತೆಗೆ ನಿಂತುಕೊಂಡಿರುವವರಿಗೆಲ್ಲ ತುಂಬು ಹೃದಯದ ಧನ್ಯವಾದಗಳು ಎಂದು ನಟಿ ಭಾವನಾ ಹೇಳಿಕೊಂಡಿದ್ದಾರೆ.

35 ವರ್ಷದ ನಟಿ ಭಾವನಾ ಮುಂದೆ ನವೀನ್ ಎಂಬುವವರನ್ನು ಮದುವೆಯಾದರು. ಮಲಿಯಾಳಂನ ಪ್ರಭಾವಿಗಳಿಂದ ಅಲ್ಲಿನ ಚಿತ್ರಗಳಲ್ಲಿ ನಟಿಸಲು ಆಗಲಿಲ್ಲ. ತಮಿಳು, ತೆಲುಗು, ಕನ್ನಡದಲ್ಲಿ ನಟಿಸುತ್ತಾ ಮಲಿಯಾಳಂ ನಟಿ ಕನ್ನಡದವರೆಯಾದರು.




Leave a Reply

Your email address will not be published. Required fields are marked *

error: Content is protected !!