ಅವರ ಚಟಕ್ಕೆ ವಿಡಿಯೋ ಮಾಡಿಕೊಳ್ತಾರೆ, ನಾವು ಚಿಲ್ಲರೆ ಕೆಲಸ ಮಾಡಲ್ಲ: ಡಿಸಿಎಂ ಡಿಕೆಶಿ

88

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಲೋಕಸಭಾ ಚುನಾವಣೆಯ ಹಾಸನ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ರಾಸಲೀಲೆ ವಿಡಿಯೋ ವೈರಲ್ ಆಗಿದೆ. ಕೇಸ್ ಆಗಿ ತನಿಖೆ ನಡೆಯುತ್ತಿದೆ. ಈ ಪೆನ್ ಡ್ರೈವ್ ಹಿಂದೆ ಡಿ.ಕೆ ಶಿವಕುಮಾರ್ ಇದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ಕುಮಾರಸ್ವಾಮಿ ಆರೋಪಕ್ಕೆ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಅವರ ಚಟಕ್ಕೆ ಅವರು ವಿಡಿಯೋ ಮಾಡಿಕೊಳ್ತಾರೆ. ನಾವು ಇಂಥ ಚಿಲ್ಲರೆ ಕೆಲಸ ಮಾಡಲ್ಲ ಎಂದು ತಿರುಗೇಟು ನೀಡಿದರು.

ನಾವು ಪೆನ್ ಡ್ರೈವ್ ಇಟ್ಟುಕೊಂಡು ಹೆದರಿಸಲ್ಲ. ಚುನಾವಣೆಯಲ್ಲಿ ಎದುರಿಸುತ್ತೇವೆ. ಕುಮಾರಸ್ವಾಮಿಯವರಿಗೆ ನನ್ನನ್ನು ನೆನಪಿಸಿಕೊಂಡಿಲ್ಲ ಅಂದ್ರೆ ನಿದ್ದೆ ಬರಲ್ಲ. ವಿದೇಶಕ್ಕೆ ಹೋಗುವಾಗ ಜೊತೆಯಲ್ಲಿ ಯಾರಿದ್ದರು? ಯಾರಿಗೆ ಫೋನ್ ಮಾಡಿದ್ದರು ಎಂದು ಅವರಿಗೆ ಕೇಳಬೇಕು. ಇದು ಹಳೆಯ ವಿಡಿಯೋ ಎಂದು ರೇವಣ್ಣ ಹೇಳುತ್ತಾರೆ. ಅಂದರೆ, ಪ್ರಜ್ವಲ್ ವಿಡಿಯೋ ಎಂದು ಒಪ್ಪಿಕೊಂಡಿದ್ದಾರೆ. ಬಿಜೆಪಿಯವರು ಯಾಕೆ ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.




Leave a Reply

Your email address will not be published. Required fields are marked *

error: Content is protected !!