Home About Us
About Us

ಪ್ರಿಯ ಓದುಗರೇ,
ತಾಂತ್ರಿಕ ಕ್ರಾಂತಿಯಿಂದಾಗಿ ಇವತ್ತು ಬೆರಳ ತುದಿಯಲ್ಲಿಯೇ ಜಗತ್ತಿದೆ. ಹೀಗಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ಕ್ಷಿಪ್ರ ಬೆಳವಣಿಗೆ ಆಗುತ್ತಿದೆ. ಮಾಧ್ಯಮ ಲೋಕದಲ್ಲಿಯೂ ಇದರ ಗಾಳಿ ಜೋರಾಗಿ ಬೀಸುತ್ತಿದೆ. ಇದರಿಂದಾಗಿ ಮುದ್ರಣ ಮಾಧ್ಯಮದಿಂದ ವೆಬ್ ಪ್ರಪಂಚಕ್ಕೆ ಕಾಲಿಟ್ಟಿದೆ. ಇದರ ಪರಿಣಾಮ ಕ್ಷಣ ಕ್ಷಣದ ಸುದ್ದಿಯನ್ನು ಜನರಿಗೆ ತಲುಪಿಸಲಾಗುತ್ತಿದೆ. ಇಂತಹ ವಲಯದಲ್ಲಿ ಕಳೆದ ಆರೇಳು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ನಮ್ಮ ತಂಡದ ಫಲವಾಗಿ ಆಯತದ ಬಣ್ಣದ ಪರದೆಯಲ್ಲಿ ‘ಪ್ರಜಾಸ್ತ್ರ’ ವೆಬ್ ಪತ್ರಿಕೆ ನಿಮ್ಮ ಅಂಗೈಗೆ ಬಂದಿದೆ.
ರಾಜಕೀಯ, ಅಪರಾಧ, ಸಿನಿಮಾ, ಸಾಹಿತ್ಯ, ರಂಗಭೂಮಿ, ಶಿಕ್ಷಣ, ಕೃಷಿ, ಕ್ರೀಡೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದ ಸುದ್ದಿ ಮತ್ತು ವಿಶ್ಲೇಷಣೆ ಜೊತೆಗೆ ಖ್ಯಾತನಾಮರ ಸಂದರ್ಶನ, ಲೇಖನಗಳ ಗುಚ್ಛ ನಿಮಗೆ ಸಿಗುತ್ತೆ. ನಮ್ಮ ಸುದ್ದಿ ಜಾಲತಾಣಕ್ಕೆ ಚಂದಾದಾರರಾಗಿ ಬೆಳೆಸಿ, ಪ್ರೋತ್ಸಾಹಿಸುವ ಜವಾಬ್ದಾರಿ ನಿಮ್ಮ ಮೇಲಿದೆ.
– ಪ್ರಜಾಸ್ತ್ರ ತಂಡ
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ
8970910323, 8070910283